'ಬಿಗ್ ಬಾಸ್', ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಬಹು ಭಾಷೆಗಳಲ್ಲಿ ಪ್ರಸಾರ ಕಾಣುವ ಈ ರಿಯಾಲಿಟಿ ಶೋಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಬಿಗ್ ಬಾಸ್ ಕನ್ನಡ ತನ್ನದೇ ಆದ ಮನ್ನಣೆ ಸಂಪಾದಿಸಿದೆ. ಸೀಸನ್ 11 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಹಳ್ಳಿ ಹೈದ ಹನುಮಂತು ವಿಜೇತರಾಗಿ ಹೊರಹೊಮ್ಮಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದೆಗಳ ಮಹಾಪೂರ ಹರಿಸಿದ್ದಾರೆ. ಜೊತೆಗೆ ತಮ್ಮ ಮೆಚ್ಚಿನ ಸ್ಪರ್ಧಿ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಹನುಮಂತು ಗೆದ್ದ: ತಮ್ಮ ಮುಗ್ಧತೆಯಿಂದಲೇ ಸದ್ದು ಮಾಡಿದ ಸೀಸನ್ 11ರ ಸ್ಪರ್ಧಿಯೆಂದ್ರೆ ಹನುಮಂತು. ಮಾತು ಕಡಿಮೆ ಆದ್ರೂ ತೂಕದ ಮಾತು, ಬುದ್ಧಿವಂತಿಕೆ ಮತ್ತು ಪ್ರಬುದ್ಧತೆಯ ಮಾತು ಇವರದ್ದು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಫಿನಾಲೆಗೆ ತಲುಪಿದ ಮೊದಲ ಸ್ಪರ್ಧಿಯಾಗಿದ್ದರು. ಕಂಪ್ಲೀಟ್ ಟಾಸ್ಕ್ಗಳಿಂದಲೇ ತುಂಬಿದ್ದ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ಕೊಟ್ಟು, ತಮ್ಮ ಸಾಮರ್ಥ್ಯ ಸಾಬೀತುಪಡಿಸಿ, ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ಹನುಮಂತು ಅವರೀಗ ಟ್ರೋಫಿ ಗೆದ್ದಿದ್ದಾರೆ.
ಇದನ್ನೂ ಓದಿ:ಪದ್ಮಭೂಷಣ ಪ್ರಶಸ್ತಿ ಕರ್ನಾಟಕದ ಜನತೆಗೆ ಅರ್ಪಣೆ : ನಟ ಅನಂತನಾಗ್
ಸುದೀಪ್ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆಯ ವಿಜೇತ: ಬಿಗ್ ಬಾಸ್ ಸೀಸನ್ 11 ಆರಂಭವಾದ ಕೆಲವೇ ದಿನಗಳಲ್ಲಿ ಇದು ನನ್ನ ನಿರೂಪಣೆಯಲ್ಲಿ ಮೂಡಿ ಬರಲಿರುವ ಕೊನೆ ಶೋ ಎಂದು ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟ ಸುದೀಪ್ ಘೋಷಿಸಿದ್ದರು. ತಮ್ಮ ಕೊನೆಯ ಕಿಚ್ಚನ ಪಂಚಾಯ್ತಿ ಪ್ರಸಾರ ಕಂಡ ಸಂದರ್ಭದಲ್ಲೂ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದರು. ಮುಂದಿನ ಸೀಸನ್ ಯಾರು ನಡೆಸಿಕೊಡಲಿದ್ದಾರೆ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸೀಸನ್ 11 ಸುದೀಪ್ ನಿರೂಪಣೆಯಲ್ಲಿ ಮೂಡಿಬಂದ ಕೊನೆ ಸೀಸನ್ ಆಗಿದ್ದು, ಹನುಮಂತು ಸುದೀಪ್ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆ ವಿಜೇರಾಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ಫಿನಾಲೆ ತಲುಪಿದ್ದ ಜನಮೆಚ್ಚಿದ ಸ್ಪರ್ಧಿಗಳಿವರು: ರಜತ್ ಕಿಶನ್, ಮೋಕ್ಷಿತಾ, ಹನುಮಂತು, ತ್ರಿವಿಕ್ರಮ್, ಮಂಜು, ಭವ್ಯಾ.
ತ್ರಿವಿಕ್ರಮ್ ರನ್ನರ್ ಅಪ್: ಈ ರಿಯಾಲಿಟಿ ಶೋನ ಆರಂಭದಿಂದಲೂ ಟಫೆಸ್ಟ್ ಕಂಟಸ್ಟೆಂಟ್ ಎಂದು ಗುರುತಿಸಿಕೊಂಡವರು ತ್ರಿವಿಕ್ರಮ್. ಹೆಚ್ಚು ಮಾತನಾಡದೇ, ಆಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆಟಕ್ಕೆ ನಿಂತ್ರೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟುತ್ತಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಮನೆಯವರ ಜೊತೆ ಬೆರೆತಿದ್ದ ಇವರ ಭವ್ಯಾ ಜೊತೆಗಿನ ಸ್ನೇಹ ಗಮನ ಸೆಳೆದಿದೆ.
ಇದನ್ನೂ ಓದಿ:ತವರಿಗೆ ಮರಳಿದ ಶಿವಣ್ಣ: ಕಿಂಗ್ ಇಸ್ ಬ್ಯಾಕ್ ಎಂದು ಅಭಿಮಾನಿಗಳಿಂದ ಸಂಭ್ರಮಾಚರಣೆ