ಕರ್ನಾಟಕ

karnataka

ETV Bharat / entertainment

'ಮೋಕ್ಷಿತಾ ಕರೆಕ್ಟ್​​, ಗೆಳೆಯ ಗೆಳತಿ ಇನ್ನಿರೋದಿಲ್ಲ, ಮುಗಿಸ್ತಿದ್ದೇನೆ': ಟಾಸ್ಕ್​​ ಹೊಡೆತಕ್ಕೆ ಮಂಜು ಗೌತಮಿ ಫ್ರೆಂಡ್​ಶಿಪ್​ ಪೀಸ್​ ಪೀಸ್​!

ಬಿಗ್​ ಬಾಸ್​ನಲ್ಲಿ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿರುವ ಮಂಜು ಮತ್ತು ಗೌತಮಿ ನಡುವೆ ಅಂತರ ಮೂಡುವಂತೆ ತೋರಿದೆ.

Manju, Gowthami, mokshitha
ಮಂಜು, ಗೌತಮಿ, ಮೋಕ್ಷಿತಾ (Photo: Bigg boss team)

By ETV Bharat Entertainment Team

Published : 4 hours ago

'ಬಿಗ್​ ಬಾಸ್​ ಕನ್ನಡ ಸೀಸನ್​​​ 11'ರ ಜನಪ್ರಿಯತೆ ಈ ಮೊದಲಿಗಿಂತಲೂ ಹೆಚ್ಚಾಗಿದೆ. ಶೋ ವೀಕ್ಷಿಸುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟಾಸ್ಕ್​ ಸಲುವಾಗಿಯೇ ಬಂದ ಮತಗಳ ಸಂಖ್ಯೆ 90 ಲಕ್ಷಕ್ಕೂ ಅಧಿಕ ಅಂದ್ರೆ ನೀವೇ ಊಹಿಸಿ ಈ ಕಾರ್ಯಕ್ರಮದ ಜನಪ್ರಿಯತೆಯನ್ನು. ಹೀಗೆ ಆಟ ಸಾಗುತ್ತಿದ್ದು, ಸ್ನೇಹ ಸಂಬಂಧಗಳನ್ನು ಸೈಡಿಗಿಡುವ ಸಮಯ ಬಂದುಬಿಟ್ಟಿದೆ. ಅದರಂತೆ, ಆಪ್ತ ಸ್ನೇಹಿತರಾಗಿ ಕಾಣಿಸಿಕೊಂಡಿರುವ ಉಗ್ರಂ ಮಂಜು ಮತ್ತು ಗೌತಮಿ ಜಾಧವ್​​ ಅಂತರ ಕಾಯ್ದುಕೊಳ್ಳುವ ಎಲ್ಲಾ ಲಕ್ಷಣಗಳಿವೆ. ಇದರ ಸುಳಿವನ್ನು ಬಿಗ್​ ಬಾಸ್​ ಇಂದು ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಬಿಟ್ಟುಕೊಟ್ಟಿದೆ.

ಹೌದು, ''ಆಟದ ಹೊಡೆತಕ್ಕೆ ಗೆಳೆತನ ಪೀಸ್.. ಪೀಸ್!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಮಂಜು ಅವರ ಬಳಿ ಗೌತಮಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರೋದನ್ನು ಕಾಣಬಹುದು. ಮೋಕ್ಷಿತಾ ಹೇಳಿದ್ದು ಸರಿ​​, ಗೆಳೆಯ ಗೆಳತಿ ಅನ್ನೋದು ಇನ್ನಿರೋದಿಲ್ಲ, ಮುಗಿಸ್ತಿದ್ದೇನೆ ಎಂಬ ಮಾತುಗಳನ್ನು ಮಂಜು ಬಳಿ ಗೌತಮಿ ತಿಳಿಸಿದ್ದಾರೆ. ಇಷ್ಟು ದಿನ ಜೊತೆಯಾಗೇ ಕಾಣಿಸಿಕೊಂಡಿರುವ ಮಂಜು ಮತ್ತು ಗೌತಮಿ ಇನ್ಮುಂದೆ ಈ ಸ್ನೇಹವನ್ನು ಮುಂದುವರಿಸೋದಿಲ್ಲವೇ ಅನ್ನೋದು ಬಹುತೇಕರ ಪ್ರಶ್ನೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

'ನಾನು ಕ್ಯಾಪ್ಟನ್​ ಆದಾಗ ಡು ನಾಟ್​ ಲೀಡ್​ ಮಿ. ನಿಮ್ಮ ವಾಯ್ಸ್​​​ನಲ್ಲಿ ನನ್ನ ವಾಯ್ಸ್​​ ಕೆಳಗೆ ಹೋಗ್ತಿದೆ' ಎಂದು ಮಂಜು ಬಳಿ ಗೌತಮಿ ತಿಳಿಸಿದ್ದಾರೆ. ಗೌತಮಿ ಉಸ್ತುವಾರಿಯಲ್ಲಿ ಟಾಸ್ಕ್​ ನಡೆಯುತ್ತಿದ್ದ ಸಂದರ್ಭ ಮಂಜು ದನಿ ಏರಿಸಿದ್ದು, ಯಾರೂ ಮಾತನಾಡಬೇಡಿ, ಮಂಜು ಅವ್ರೆ ನಿಮಗೆ ಇಪ್ಪತ್ತು ಬಾರಿ ಹೇಳೋಕೆ ಆಗೋದಿಲ್ಲ ಎಂದು ಗೌತಮಿ ಹೇಳಿದ್ದಾರೆ.

ಇದನ್ನೂ ಓದಿ:ಗೂಗಲ್​​ನಲ್ಲಿ ಹೆಚ್ಚು ಸರ್ಚ್​​ ಆಯ್ತು ಕನ್ನಡದ ಪ್ರಶಾಂತ್​ ನೀಲ್​ ಸಿನಿಮಾ: ಟಾಪ್ 10 ಟ್ರೆಂಡಿಂಗ್​ ಫಿಲ್ಮ್ಸ್​​ ಪಟ್ಟಿ ಹೀಗಿದೆ

ನಂತರ ಇಬ್ಬರೂ ಕುಳಿತು ಪರಸ್ಪರ ಚರ್ಚೆ ನಡೆಸಿದ್ದಾರೆ. ಮೋಕ್ಷಿತಾ ಅವ್ರು ಹೇಳಿದ್ದು ಸರಿ. ಅವರಿಬ್ಬರೇ (ಗೌತಮಿ, ಮಂಜು) ಮಾತಾಡ್ತಾರೆ ಅಂತಾ ಮೋಕ್ಷಿತಾ ತಿಳಿಸಿದ್ರು. ವಾಸ್ತವವಾಗಿ ಅವರು ಹೇಳಿರುವ ಲೈನ್ಸ್​ ಕರೆಕ್ಟ್​ ಇದೆ ಎಂದು ನನಗನಿಸುತ್ತಿದೆ. ನೀವೇನು ಮಾತಾಡ್ತೀರೋ ಹಾಗೆ ಇಲ್ಲ ನೀವು ಎಂದು ಗೌತಮಿ ತಮ್ಮ ಅಸಮಧಾನಗಳನ್ನು ತೋಡಿಕೊಂಡಿದ್ದಾರೆ. ನಂತರ ಗೌತಮಿ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್​​ನಿಂದ ಹೊರಗಿಡಬೇಕು ಎಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಆಗ ಮಂಜು ಅವರ ಹೆಸರು ತೆಗೆದುಕೊಂಡಿದ್ದಾರೆ. ಇದು ಮನೆಯ ಇತರೆ ಸ್ಪರ್ಧಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ. ಬಳಿಕ, ಕುಳಿತು ಚರ್ಚೆ ನಡೆಸುವಾಗ, ಇಲ್ಲ ಗೆಳೆಯ ಗೆಳತಿ ಇನ್ನುಂದೆ ಇರೋದಿಲ್ಲ, ಮುಗಿಸ್ತಾ ಇದ್ದೇನೆ ಎಂದು ಗೌತಮಿ ತಿಳಿಸಿ ಎದ್ದು ಹೊರಟಿದ್ದಾರೆ. ಇದು ನೋಡುಗರ ಹುಬ್ಬೇರಿಸಿದೆ.

ಇದನ್ನೂ ಓದಿ:ಐಶ್​-ಅಭಿ ಡಿವೋರ್ಸ್​​ ರೂಮರ್ಸ್​​ ನಡುವೆ ತಮ್ಮ ಕುಟುಂಬದಲ್ಲಿನ ಪ್ರೇಮ ವಿವಾಹಗಳ ಬಗ್ಗೆ ಮಾತನಾಡಿದ ಅಮಿತಾಭ್​​ ಬಚ್ಚನ್

ಬಿಗ್​ ಬಾಸ್​ ಆರಂಭವಾದಾಗ ಮಂಜು, ಮೋಕ್ಷಿತಾ, ಗೌತಮಿ ಮೂವರೂ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡರು. ಆದ್ರೆ ಕೆಲ ದಿನಗಳ ಹಿಂದೆ ಮೋಕ್ಷಿತಾ ಈ ಗುಂಪಿನಿಂದ ಹೊರ ಬಂದರು. ನಂತರ ತಮ್ಮ ಮನಸ್ತಾಪಗಳನ್ನು ಹೊರ ಹಾಕಿದರು. ಟಾಸ್ಕ್​ನಲ್ಲೂ ಇದು ಬಹಿರಂಗವಾಗಿ ಕಾಣಿಸಿಕೊಳ್ತು. ಕಿಚ್ಚನ ಪಂಚಾಯ್ತಿಯಲ್ಲೂ ಚರ್ಚೆ ಬಂದಿತ್ತು. ಇದೀಗ ಮಂಜು ಮತ್ತು ಗೌತಮಿ ಅವರ ಸ್ನೇಹದಲ್ಲೂ ಅಂತರ ಮೂಡುವಂತೆ ತೋರಿದೆ. ಏನಾಗಲಿದೆ ಎಂಬುದು ಸಂಪೂರ್ಣ ಸಂಚಿಕೆಯಲ್ಲಿ ಬಹಿರಂಗಗೊಳ್ಳಲಿದೆ.

ABOUT THE AUTHOR

...view details