ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕಿರಿಯ ಸಹಾಯಕರು ಮತ್ತು ಕಂಪ್ಯೂಟರ್ ಸಹಾಯಕರು ಸೇರಿದಂತೆ ಒಟ್ಟು 28 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ:
- ಸೀನಿಯರ್ ಪ್ರೋಗ್ರಾಮರ್ - 2
- ಜೂನಿಯರ್ ಪ್ರೋಗ್ರಾಮರ್ - 2
- ಜೂನಿಯರ್ ಕನ್ಸೋಲ್ ಆಪರೇಟರ್ - 4
- ಕಂಪ್ಯೂಟರ್ ಆಪರೇಟರ್ - 4
- ಸಹಾಯಕರು - 3
- ಕಿರಿಯ ಸಹಾಯಕರು - 8
- ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು -5
ವಿದ್ಯಾರ್ಹತೆ:
- ಸೀನಿಯರ್ ಪ್ರೋಗ್ರಾಮರ್ - ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ
- ಜೂನಿಯರ್ ಪ್ರೋಗ್ರಾಮರ್ ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ
- ಜೂನಿಯರ್ ಕನ್ಸೋಲ್ ಆಪರೇಟರ್ ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವ
- ಕಂಪ್ಯೂಟರ್ ಆಪರೇಟರ್ ಬಿಸಿಎ ಅಥವಾ ಸಿಎಸ್, ಎಲೆಕ್ಟ್ರಾನಿಕ್ಸ್ನಲ್ಲಿ ಬಿಎಸ್ಸಿ ಪದವಿ
- ಸಹಾಯಕರು ಕಾನೂನು ಪದವಿ
- ಕಿರಿಯ ಸಹಾಯಕರು ಪದವಿ
- ದತ್ತಾಂಶ ನಮೂದು ಸಹಾಯಕರು / ಬೆರಳಚ್ಚುಗಾರರು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕೆಎಸ್ಇಇಬಿಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ, ಪ. ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ