ಕರ್ನಾಟಕ

karnataka

ETV Bharat / education-and-career

UPSC ನೇಮಕಾತಿ : IES, ISS ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ - IES EXAM NOTIFICATION BY UPSC

ಆರ್ಥಿಕ ಸಚಿವಾಲಯದ ಉನ್ನತ ಹುದ್ದೆಗಳಾದ ಐಇಎಸ್​ ಮತ್ತು ಐಎಸ್​ಎಸ್​ ಹುದ್ದೆಗೆ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

UPSC Recruitment for Indian Economic Service and Indian Statistical Service post
ಕೇಂದ್ರ ಲೋಕಸೇವಾ ಆಯೋಗ (ಐಎಎನ್​ಎಸ್​)

By ETV Bharat Karnataka Team

Published : Feb 13, 2025, 5:22 PM IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಭಾರತೀಯ ಆರ್ಥಿಕ ಸೇವೆಗಳ (ಐಇಎಸ್‌) ಮತ್ತು ಭಾರತೀಯ ಅಂಕಿ ಅಂಶಗಳ ಸೇವೆ (ಐಎಸ್​ಎಸ್ಇ) ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆರ್ಥಿಕ ಸಚಿವಾಲಯದ ಅತ್ಯುನ್ನತ ಹುದ್ದೆಗಳು ಇವಾಗಿದ್ದು, ಒಟ್ಟು 47 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಒಟ್ಟು ಹುದ್ದೆಗಳು 47

ಅಧಿಸೂಚನೆ (UPSC)
  • ಭಾರತೀಯ ಆರ್ಥಿಕ ಸೇವೆ - 12
  • ಭಾರತೀಯ ಅಂಕಿ ಅಂಶಗಳ ಸೇವಾ ಪರೀಕ್ಷೆ - 35

ವಿದ್ಯಾರ್ಹತೆ :

ಭಾರತೀಯ ಆರ್ಥಿಕ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಥಶಾಸ್ತ್ರ, ಅಪ್ಲೈಡ್​ ಎಕನಾಮಿಕ್ಸ್​, ಬ್ಯುಸಿನೆಸ್​ ಎಕನಾಮಿಕ್ಸ್​, ಎಕೋನಾಮೆಟ್ರಿಕ್ಸ್​ನಲ್ಲಿ ಪದವಿಯನ್ನು ಹೊಂದಿರಬೇಕು.

ಭಾರತೀಯ ಅಂಕಿಂಶಗಳ ಸೇವೆಗೆ ಅಭ್ಯರ್ಥಿಗಳು ಸಂಖ್ಯಾಶಾಸ್ತ್ರ, ಮ್ಯಾಥಮೆಟಿಕಲ್​ ಸ್ಟಾಟಿಸ್ಟಿಕ್​ ಅಥವಾ ಅಪ್ಲೈಡ್​ ಸ್ಟಾಟಿಸ್ಟಿಕ್ಸ್​ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷಗಳ ವಯೋಮಿತಿ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ವೈಯಕ್ತಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳಿಗೆ ಫೆಬ್ರವರಿ 12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್​ 4 ಆಗಿದೆ. ಅರ್ಜಿ ಪರಿಷ್ಕರಣೆಗೆ ಮಾರ್ಚ್​ 5 ರಿಂದ 11ರ ವರೆಗೆ ಕಾಲಾವಕಾಶವಿದೆ.

ಈ ಹುದ್ದೆ ಅಧಿಸೂಚನೆ ಹಾಗೂ ಹೆಚ್ಚಿನ ಮಾಹಿತಿಗಾಗಿ upsc.gov.in ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವುದು ಹೇಗೆ? ಕೈಬರಹ ಸುಧಾರಣೆಗೆ ತಜ್ಞರ ಸಲಹೆಗಳು

ಇದನ್ನೂ ಓದಿ:SSLC ಆದವರಿಗೆ ಬಂಪರ್​ ಅವಕಾಶ; ಕರ್ನಾಟಕದಲ್ಲಿ 1,135 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳ ನೇಮಕಾತಿ

ABOUT THE AUTHOR

...view details