ಬೆಂಗಳೂರು :ಕೇಂದ್ರ ರಕ್ಷಣಾ ಇಲಾಖೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಬಿ ನಾನ್ ಗೆಜೆಟೆಡ್ ಹುದ್ದೆಗಳು ಇವಾಗಿವೆ.
ಹುದ್ದೆ ವಿವರ : ಒಟ್ಟು ಹುದ್ದೆಗಳು 4
- ಅಸಿಸ್ಟಂಟ್ ಮಾಸ್ಟರ್ (ಪಿಸಿಕ್ಸ್) - 1
- ಅಸಿಸ್ಟಂಟ್ ಮಾಸ್ಟರ್ (ಕೆಮಿಸ್ಟ್ರಿ) - 2
- ಅಸಿಸ್ಟಂಟ್ ಮಾಸ್ಟರ್ (ಇಂಗ್ಲಿಷ್) - 1
ವಿದ್ಯಾರ್ಹತೆ : ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಒಂದು ವರ್ಷ ಹುದ್ದೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.
ವೇತನ : ಮಾಸಿಕ 44,900 ರಿಂದ 1,42,400 ರೂ.
ವಯೋಮಿತಿ :ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 30 ವರ್ಷ ದಾಟಿರಬಾರದು. ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಅದನ್ನು ಅಗತ್ಯ ಪ್ರಮಾಣ ಪತ್ರ ಹಾಗೂ ಅರ್ಜಿ ಶುಲ್ಕದೊಂದಿಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ಅಂತಿಮ ದಿನಕ್ಕೆ ಮುನ್ನ ಸಲ್ಲಿಕೆ ಮಾಡಬೇಕು.