ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿಗೆ ಕರೆಯಲಾಗಿದ್ದ ಅರ್ಜಿ ಆಹ್ವಾನದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಒಟ್ಟು 1,377 ಬೋಧಕೇತರ ಹುದ್ದೆಗಳಿಗೆ ಮೇ 7ರವರೆಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತಾದ್ಯಂತ ಭರ್ತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು | ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ |
ಮಹಿಳಾ ಸ್ಟಾಫ್ ನರ್ಸ್ | 121 | ಬಿಎಸ್ಸಿ |
ಅಸಿಸ್ಟೆೆಂಟ್ ಸೆಕ್ಷನ್ ಆಫೀಸರ್ | 5 | ಪದವಿ |
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ | 5 | ಪದವಿ |
ಆಡಿಟ್ ಅಸಿಸ್ಟೆಂಟ್ | 12 | ಬಿಕಾಂ |
ಜೂ. ಟ್ರಾನ್ಸ್ಲೇಷನ್ ಅಫೀಸರ್ | 4 | ಸ್ನಾತಕೋತ್ತರ ಪದವಿ |
ಲೀಗಲ್ ಅಸಿಸ್ಟೆಂಟ್ | 1 | ಎಲ್ಎಲ್ಬಿ |
ಸ್ಟೆನೋಗ್ರಾಫರ್ | 23 | ಪಿಯುಸಿ |
ಕಂಪ್ಯೂಟರ್ ಆಪರೇಟರ್ | 2 | ಬಿಸಿಎ. ಬಿಎಸ್ಸಿ, ಬಿಇ |
ಕ್ಯಾಟರಿಂಗ್ ಸೂಪರ್ವೈಸರ್ | 78 | ಪದವಿ |
ಜೂ.ಸೆಕ್ರೆಟರಿಯೇಟ್ ಅಸಿಸ್ಟೆಂಟ್ | 381 | ಪಿಯುಸಿ |
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ | 128 | 10ನೇ ತರಗತಿ, ಐಟಿಐ |
ಲ್ಯಾಬ್ ಅಸಿಸ್ಟೆಂಟ್ | 161 | 10ನೇ ತರಗತಿ, ಡಿಪ್ಲೊಮಾ |
ಮೆಸ್ ಹೆಲ್ಪರ್ | 442 | 10ನೇ ತರಗತಿ |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | 19 | 10ನೇ ತರಗತಿ |
ವಯೋಮಿತಿ: ಕನಿಷ್ಠ 18 ಗರಿಷ್ಠ, ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.