WANT TO BUY A GOOD CAR IN RS.5 LAKH BUDGET?: ನೀವು ಹೊಸ ಕಾರನ್ನು ಖರೀದಿಸಬೇಕೆಂದಿದ್ದೀರಾ? ನಿಮ್ಮ ಬಜೆಟ್ ರೂ. 5 ಲಕ್ಷ ಒಳಗಿದೆಯಾ? ಹಾಗಾದರೆ ಇಲ್ಲಿದೆ ನಿಮಗಾಗಿ 5 ಲಕ್ಷ ರೂ. ಬಜೆಟ್‌ನಲ್ಲಿ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 6 ಕಾರುಗಳು!
ಇತ್ತೀಚಿನ ದಿನಗಳಲ್ಲಿ, ಕುಟುಂಬದೊಂದಿಗೆ ಪ್ರಯಾಣಿಸಲು ಕಾರು ಅತ್ಯಗತ್ಯವಾಗಿದೆ. ಏಕೆಂದರೆ ಬೈಕ್ನಲ್ಲಿ ಎರಡು ಮೂರಕ್ಕಿಂತ ಹೆಚ್ಚು ಜನ ಹೋಗುವಂತಿಲ್ಲ. ಅದಕ್ಕಾಗಿಯೇ ಅನೇಕ ಜನರು ಸಣ್ಣ ಬಜೆಟ್‌ನಲ್ಲಿ ಉತ್ತಮ ಕಾರನ್ನು ಖರೀದಿಸಲು ಆಶಿಸುತ್ತಾರೆ. ಅಂತಹವರಿಗೆ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 5 ಲಕ್ಷ ರೂ. ಬಜೆಟ್‌ನಲ್ಲಿ ಉತ್ತಮ ಕಾರುಗಳು ಲಭ್ಯವಿವೆ.
1. ಮಾರುತಿ ಸುಜುಕಿ ಆಲ್ಟೊ 800 ವಿಶೇಷತೆಗಳು: ಮಾರುತಿ ಸುಜುಕಿ ಆಲ್ಟೊ 800 ಐದು ರೂಪಾಂತರಗಳು ಮತ್ತು ಆರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮಾದರಿಯ ಕಾರುಗಳು ಪ್ರತಿ ಲೀಟರ್‌ಗೆ 24.7 ಕಿಮೀ - 31.4 ಕಿಮೀ ವೇರಿಯಂಟ್‌ಗಳ ಆಧಾರದ ಮೇಲೆ ಮೈಲೇಜ್ ನೀಡುತ್ತವೆ. ಮಾರುತಿ ಸುಜುಕಿ ಆಲ್ಟೊ 800 ಕಾರಿನ ಬೆಲೆ ಮಾರುಕಟ್ಟೆಯಲ್ಲಿ ರೂ. 3.54 ರಿಂದ ರೂ. 5.13 ಲಕ್ಷಗಳಷ್ಟಿದೆ. ( ಎಕ್ಸ್ ಶೋರೂಂನ ಬೆಲೆ)
- ಎಂಜಿನ್ - 796 ಸಿಸಿ
- ಇಂಧನ ಪ್ರಕಾರಗಳು - ಪೆಟ್ರೋಲ್, ಪೆಟ್ರೋಲ್+CNG
- ಮೈಲೇಜ್ - 24.7 - 31.4 kmpl
- ಗರಿಷ್ಠ ಟಾರ್ಕ್ - 60,69 Nm
- ಗರಿಷ್ಠ ಶಕ್ತಿ - 40,47 bhp
- ಟ್ರಾನ್ಸ್ಮಿಷನ್ - ಮ್ಯಾನುವಲ್
- ಬೂಟ್ ಸ್ಪೇಸ್ - 177 ಲೀಟರ್
2. ಮಾರುತಿ ಸುಜುಕಿ ಆಲ್ಟೊ ಕೆ10 ವಿಶೇಷತೆಗಳು: ಮಾರುತಿ ಸುಜುಕಿ ಆಲ್ಟೊ ಕೆ10, 8 ರೂಪಾಂತರಗಳು ಮತ್ತು ಆರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮಾದರಿಯ ಕಾರು ಪ್ರತಿ ಲೀಟರ್‌ಗೆ 27 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಆಲ್ಟೊ ಕೆ10 ಮಾದರಿಯ ಕಾರಿನ ಬೆಲೆ ರೂ. 3.99 - ರೂ. 5.96 ಲಕ್ಷ.( ಎಕ್ಸ್ ಶೋರೂಂನ ಬೆಲೆ)
- ಎಂಜಿನ್ - 998 ಸಿಸಿ
- ಇಂಧನ ಪ್ರಕಾರ - ಪೆಟ್ರೋಲ್, ಪೆಟ್ರೋಲ್+CNG
- ಮೈಲೇಜ್- 27 ಕೆಎಂಪಿಎಲ್
- ಗರಿಷ್ಠ ಟಾರ್ಕ್ - 82,89 Nm
- ಗರಿಷ್ಠ ಶಕ್ತಿ - 55,66 bhp
- ಟ್ರಾನ್ಸ್ಮಿಷನ್ - ಮ್ಯಾನ್ವಲ್, ಆಟೋಮೆಟಿಕ್
- ಬೂಟ್ ಸ್ಪೇಸ್ - 214 ಲೀಟರ್
3. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ವಿಶೇಷತೆಗಳು: ಮಾರುತಿ ಸುಜುಕಿ ಎಸ್-ಪ್ರೆಸ್ಸೊ, 8 ರೂಪಾಂತರಗಳು ಮತ್ತು ಆರು ಬಣ್ಣಗಳಲ್ಲಿ ಲಭ್ಯವಿದೆ. ಈ ಮಾದರಿಯ ಕಾರುಗಳು ಪ್ರತಿ ಲೀಟರ್‌ಗೆ 24.8 ಕಿಮೀ - 32.7 ಕಿಮೀ ವೇರಿಯಂಟ್‌ಗಳ ಆಧಾರದ ಮೇಲೆ ಮೈಲೇಜ್ ನೀಡುತ್ತವೆ. ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನ ಬೆಲೆ ರೂ. 4.27 ರಿಂದ ರೂ. 6.12 ಲಕ್ಷದವರೆಗೆ ದರ ಇದೆ( ಎಕ್ಸ್ ಶೋರೂಂ ಬೆಲೆ)
- ಎಂಜಿನ್ - 998 ಸಿಸಿ
- ಇಂಧನ ಪ್ರಕಾರ - ಪೆಟ್ರೋಲ್, ಪೆಟ್ರೋಲ್+CNG
- ಮೈಲೇಜ್ - 24.8 - 32.7 kmpl
- ಗರಿಷ್ಠ ಟಾರ್ಕ್ - 82,89 Nm
- ಗರಿಷ್ಠ ಶಕ್ತಿ - 56,66 bhp
- ಟ್ರಾನ್ಸ್ಮಿಷನ್ -ಮ್ಯಾನ್ವಲ್, ಆಟೋಮೆಟಿಕ್
- ಬೂಟ್ ಸ್ಪೇಸ್ - 240 ಲೀಟರ್
4. ಬಜಾಜ್ ಕ್ಯೂಟ್ ವಿಶೇಷತೆಗಳು: ಬಜಾಜ್ ಕ್ಯೂಟ್ ಕಾರು, 2 ರೂಪಾಂತರಗಳು ಮತ್ತು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಮಾದರಿಯ ಕಾರುಗಳು ಪ್ರತಿ ಲೀಟರ್‌ಗೆ 35 ಕಿಮೀ - 43 ಕಿಮೀ ವೇರಿಯಂಟ್‌ಗಳ ಆಧಾರದ ಮೇಲೆ ಮೈಲೇಜ್ ನೀಡುತ್ತವೆ. ಬಜಾಜ್ ಕ್ಯೂಟ್ ಕಾರಿನ ಬೆಲೆ ಮಾರುಕಟ್ಟೆಯಲ್ಲಿ ರೂ. 2.64 ರಿಂದ ರೂ. 2.84 ಲಕ್ಷದವರೆಗೆ( ಎಕ್ಸ್ ಶೋ ರೂಂ) ಇರುತ್ತದೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ನೀಡುವ ಕಾರನ್ನು ಖರೀದಿಸಲು ಬಯಸುವವರಿಗೆ ಬಜಾಜ್ ಕ್ಯೂಟ್ ಉತ್ತಮ ಆಯ್ಕೆಯಾಗಿದೆ.
- ಎಂಜಿನ್ - 217 ಸಿಸಿ
- ಇಂಧನ ಪ್ರಕಾರ - ಪೆಟ್ರೋಲ್, ಪೆಟ್ರೋಲ್+CNG
- ಮೈಲೇಜ್- 35 - 43ಕೆಎಂಪಿಎಲ್
- ಗರಿಷ್ಠ ಟಾರ್ಕ್ - 16,19 Nm
- ಗರಿಷ್ಠ ಶಕ್ತಿ - 11,13 bhp
- ಟ್ರಾನ್ಸ್ಮಿಷನ್ - ಮ್ಯಾನ್ವಲ್
5. ಹುಂಡೈ ಸ್ಯಾಂಟ್ರೋ ಹೇಗಿದೆ?: ಹ್ಯುಂಡೈ ಸ್ಯಾಂಟ್ರೋ, 9 ರೂಪಾಂತರಗಳಲ್ಲಿ ಲಭ್ಯವಿದ್ದು, ಐದು ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಈ ಮಾದರಿಯ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿಮೀ - 30.6 ಕಿಮೀ ವೇರಿಯಂಟ್‌ಗಳ ಆಧಾರದ ಮೇಲೆ ಮೈಲೇಜ್ ನೀಡುತ್ತವೆ. ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೋ ಬೆಲೆ ರೂ. 4.87 - ರೂ. 6.45 ಲಕ್ಷದವರೆಗೆ ಇದೆ.
- ಎಂಜಿನ್ - 1086 ಸಿಸಿ
- ಇಂಧನ ಪ್ರಕಾರ - ಪೆಟ್ರೋಲ್, ಪೆಟ್ರೋಲ್+CNG
- ಮೈಲೇಜ್ - 20.3 - 30.5ಕೆಎಂಪಿಎಲ್
- ಗರಿಷ್ಠ ಟಾರ್ಕ್ - 86,99 Nm
- ಗರಿಷ್ಠ ಶಕ್ತಿ - 59,69 bhp
- ಟ್ರಾನ್ಸ್ಮಿಷನ್ - ಮ್ಯಾನುವಲ್, ಆಟೋಮೆಟಿಕ್
6. ರೆನಾಲ್ಟ್ ಕ್ವಿಡ್ ವಿಶೇಷತೆಗಳು: ರೆನಾಲ್ಟ್ ಕ್ವಿಡ್, 7 ರೂಪಾಂತರಗಳು ಮತ್ತು 6 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮಾದರಿಯ ಕಾರುಗಳು ಪ್ರತಿ ಲೀಟರ್‌ಗೆ 22 ಕಿಮೀ - 23 ಕಿಮೀ ವೇರಿಯಂಟ್‌ಗಳ ಆಧಾರದ ಮೇಲೆ ಮೈಲೇಜ್ ನೀಡುತ್ತವೆ. ರೆನಾಲ್ಟ್ ಕ್ವಿಡ್ ಕಾರಿನ ಬೆಲೆ ಮಾರುಕಟ್ಟೆಯಲ್ಲಿ ರೂ. 4.70 ರಿಂದ ರೂ. 6.33 ಲಕ್ಷದವರೆಗೆ ಇರುತ್ತದೆ.
- ಎಂಜಿನ್ - 999 ಸಿಸಿ
- ಇಂಧನ ಪ್ರಕಾರ - ಪೆಟ್ರೋಲ್
- ಮೈಲೇಜ್ - 22 - 23ಕೆಎಂಪಿಎಲ್
- ಗರಿಷ್ಠ ಟಾರ್ಕ್ - 91 ಎನ್ಎಂ
- ಗರಿಷ್ಠ ಶಕ್ತಿ - 67 bhp
- ಟ್ರಾನ್ಸ್ಮಿಷನ್ -ಮ್ಯಾನುವಲ್, ಆಟೋಮೆಟಿಕ್
- ಬೂಟ್ ಸ್ಪೇಸ್ - 300 ಲೀಟರ್
ಇದನ್ನೂ ಓದಿ:10 ಲಕ್ಷ ರೂ ಬಜೆಟ್‌ನಲ್ಲಿ ಅತ್ಯುತ್ತಮ ಎಸ್ಯುವಿ ಖರೀದಿಸಬೇಕಾ?: ಹಾಗಾದರೆ ಇಲ್ಲಿವೆ ಐದು ಟಾಪ್ ಕಾರುಗಳು - MOST POWERFUL SUVS UNDER 10 LAKH