ಕರ್ನಾಟಕ

karnataka

ETV Bharat / business

ಮೊಬೈಲ್ ಬಳಕೆದಾರರಿಗೆ ಬಿಗ್​ ಶಾಕ್!: ಇನ್ಮುಂದೆ ಫೋನ್ ಸಂಖ್ಯೆಗೂ ನೀವು ಶುಲ್ಕ ಪಾವತಿಸಬೇಕಾಗುತ್ತೆ!? - BIG SHOCK SMARTPHONE USERS - BIG SHOCK SMARTPHONE USERS

ಮೊಬೈಲ್ ಸಂಖ್ಯೆಗಳಿಗೂ ಶುಲ್ಕ: ಮೊಬೈಲ್ ಫೋನ್ ಬಳಕೆದಾರರಿಗೆ ಶಾಕ್! ನೀವು ಶೀಘ್ರದಲ್ಲೇ ಫೋನ್ ಸಂಖ್ಯೆಗೆ ಶುಲ್ಕವನ್ನು ಪಾವತಿಸಬೇಕಾಗಬಹುದು. TRAI ಈ ಸಂಬಂಧ ಶಿಫಾರಸುಗಳನ್ನು ಸಿದ್ಧಪಡಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾದರೆ ಟ್ರಾಯ್ ಹೇಳಿದ್ದೇನು?

fee-for-mobile-number-telecom-operators-may-soon-charge-a-fee-for-the-number-of-your-smartphone
ಮೊಬೈಲ್ ಬಳಕೆದಾರರಿಗೆ ಬಿಗ್​ ಶಾಕ್! ಇನ್ಮುಂದೆ ಫೋನ್ ಸಂಖ್ಯೆಗೂ ನೀವು ಶುಲ್ಕ ಪಾವತಿಸಬೇಕಾಗುತ್ತೆ! (Fee For Mobile Numbers (GettyImages))

By ETV Bharat Karnataka Team

Published : Jun 15, 2024, 7:10 AM IST

ನವದೆಹಲಿ: ಕೆಲವು ವರ್ಷಗಳ ಹಿಂದೆ ಸಿಮ್ ಕಾರ್ಡ್ ಪಡೆಯಲು ಶುಲ್ಕ ಪಾವತಿಸಬೇಕಾಗಿತ್ತು. ನಂತರ, ಟೆಲಿಕಾಂ ಕಂಪನಿಗಳ ನಡುವಿನ ಪೈಪೋಟಿಯಿಂದಾಗಿ ಆ ಶುಲ್ಕವನ್ನು ತೆಗೆದು ಹಾಕಲಾಗಿತ್ತು. ಹಾಗೂ ಎಲ್ಲರೂ ಉಚಿತ ಸಿಮ್ ಕಾರ್ಡ್‌ಗಳನ್ನು ನೀಡಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ ಅನೇಕ ಜನರು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಹೊಂದಿದ್ದಾರೆ. SIM ಕಾರ್ಡ್ ಉಚಿತ ಟಾಕ್ ಟೈಮ್ ಮತ್ತು ಇಂಟರ್ನೆಟ್ ಪ್ರಯೋಜನಗಳನ್ನು ಪಡೆಯಲಾಗುತ್ತಿದೆ. ಫೋನ್ ಸಂಖ್ಯೆಗಳ ವಿತರಣೆಯ ಮೇಲಿನ ಗರಿಷ್ಠ ಮಿತಿಯ ನಂತರ ಬೇಕಾಬಿಟ್ಟಿ ಸಿಮ್​ಕಾರ್ಡ್​ ಪಡೆಯುವವರ ಸಂಖ್ಯೆ ಕಡಿಮೆ ಆಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಶಿಫಾರಸುಗಳನ್ನು ಮಾಡಲು ಈಗ ಸಿದ್ಧವಾಗಿದೆ. ಫೋನ್ ಸಂಖ್ಯೆ / ಲ್ಯಾಂಡ್ ಲೈನ್ ಸಂಖ್ಯೆಗೆ ಚಾರ್ಜ್ ಮಾಡಲು ಸಿದ್ಧವಾಗುತ್ತಿದೆ. ಇದೇ ವೇಳೆ, ಮೊಬೈಲ್ ಆಪರೇಟರ್​​​ಗಳಿಂದ ಈ ಶುಲ್ಕ ವಸೂಲಿ ಮಾಡಿದರೆ, ಆಯಾ ಕಂಪನಿಗಳು ಈ ಹೊರೆಯನ್ನು ಸಹಜವಾಗಿಯೇ ಬಳಕೆದಾರರ ಮೇಲೆ ಹಾಕುವ ಸಾಧ್ಯತೆಗಳು ಇದ್ದೇ ಇವೆ.

ಟ್ರಾಯ್​ ಈ ನಿಯಮ ಜಾರಿಗೆ ತರಲು ಮುಂದಾಗಿರುವುದಕ್ಕೆ ಕಾರಣ ಎಂದರೆ ಬೇಕಾಬಿಟ್ಟಿ ಸಿಮ್​ಗಳ ಬಳಕೆಗೆ ಕಡಿವಾಣ ಹಾಕುವುದಾಗಿದೆ. ಫೋನ್ ಸಂಖ್ಯೆಗಳು ಅನಿಯಮಿತವಾಗಿಲ್ಲ, ಆದ್ದರಿಂದ ಟ್ರಾಯ್ ದುರುಪಯೋಗಗಳನ್ನು ತಡೆಯಲು ಬಯಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಫೋನ್‌ಗಳು ಡ್ಯುಯಲ್ ಸಿಮ್ ಕಾರ್ಡ್ ಆಯ್ಕೆಯೊಂದಿಗೆ ಬರುತ್ತವೆ. ಕೆಲವರು ಎರಡನೇ ಸಿಮ್ ಕಾರ್ಡ್ ಬಳಸುತ್ತಿದ್ದಾರೆ, ಆದರೆ ಅದನ್ನು ರೀಚಾರ್ಜ್ ಮಾಡುವುದು ಕಡಿಮೆ. ಆದರೆ, ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಭೀತಿಯಿಂದ ಆಯಾ ಟೆಲಿಕಾಂ ಕಂಪನಿಗಳು ಕೂಡ ಇಂತಹ ಸಂಖ್ಯೆಗಳ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ.

ಇತರ ದೇಶಗಳಲ್ಲಿ ಸಂಸತ್ತು ಅಂಗೀಕರಿಸಿದ ಟೆಲಿಕಾಂ ಕಾಯ್ದೆ ಅಡಿ ಮೊಬೈಲ್ ಸಂಖ್ಯೆಗಳಿಗೆ ಶುಲ್ಕವನ್ನು ಸಂಗ್ರಹಿಸುವ ಅವಕಾಶವಿದೆ. ಆಸ್ಟ್ರೇಲಿಯಾ, ಸಿಂಗಾಪುರ, ಬೆಲ್ಜಿಯಂ, ಫಿನ್‌ಲ್ಯಾಂಡ್, ಯುಕೆ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳಲ್ಲಿ ಮೊಬೈಲ್ ಸಂಖ್ಯೆಗಳಿಗೆ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ ಎಂದು ಟ್ರಾಯ್ ಹೇಳಿದೆ. ಆದರೆ ಪ್ರತಿ ಸಂಖ್ಯೆಗೆ ಒಮ್ಮೆ ಮಾತ್ರ ಶುಲ್ಕ ವಿಧಿಸುತ್ತೀರಾ? ಅಥವಾ ಸಂಖ್ಯೆಗೆ ವಾರ್ಷಿಕವಾಗಿ ಶುಲ್ಕ ವಿಧಿಸಲಾಗುತ್ತಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ. ಟ್ರಾಯ್ ತನ್ನ ಶಿಫಾರಸುಗಳನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ ಎಂದೂ ತಿಳಿದು ಬಂದಿದೆ.

2024ರ ಮಾರ್ಚ್ ವೇಳೆಗೆ ದೇಶದಲ್ಲಿ 119 ಕೋಟಿ ದೂರವಾಣಿ ಬಳಕೆದಾರರಿದ್ದಾರೆ. ಇದು ಟೆಲಿ ಸಾಂದ್ರತೆಯ 85.69 ಪ್ರತಿಶತದಷ್ಟಿದೆ. ಮೊಬೈಲ್ ಸಂಖ್ಯೆಗಳ ಬೇಡಿಕೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮಾವಳಿಗಳನ್ನು ತರಲು TRAI ಮುಂದಾಗಿದೆ. TRAI ಪ್ರಕಾರ, ಸಂವಹನ ತಂತ್ರಜ್ಞಾನಗಳು, 5G ನೆಟ್‌ವರ್ಕ್ ಮತ್ತು ವ್ಯಾಪಕವಾದ ಸಂವಹನ ಪ್ರಗತಿಗಳ ನಿಟ್ಟಿನಲ್ಲಿ ಪ್ರಸ್ತುತ ಸಂಖ್ಯಾ ವ್ಯವಸ್ಥೆಯ ಸಮಗ್ರ ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವೂ ಇದೆ. ಸಂಖ್ಯೆಗಳಿಗೆ ಶುಲ್ಕ ವಿಧಿಸುವುದರಿಂದ ಸೀಮಿತ ಸಂಪನ್ಮೂಲಗಳ ಸಮರ್ಥ ಹಂಚಿಕೆಯನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತೆ ಎಂಬುದು ಟ್ರಾಯ್​​​ ನಂಬಿಕೆ.

ಇದನ್ನು ಓದಿ:ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಸಮೀಪಿಸುತ್ತಿದೆ ಡೆಡ್​ಲೈನ್​: ರಿಟರ್ನ್ಸ್ ಸಲ್ಲಿಸುವ ಮುನ್ನ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ! - Income Tax Returns

ABOUT THE AUTHOR

...view details