ಕೊಯಿಮತ್ತೂರು (ತಮಿಳುನಾಡು): ವಾಲ್ಪಾರೈ ಬಳಿಯ ಟೈಗರ್ ವ್ಯಾಲಿ ಹಿಲ್ ರೋಡ್ನಲ್ಲಿ ದ್ವಿಚಕ್ರವಾಹನದ ಮೂಲಕ ಸಾಗುತ್ತಿದ್ದ ಜರ್ಮನ್ ಪ್ರವಾಸಿಗನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಪ್ರವಾಸಿಗ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯನ್ನು ಮೈಕೆಲ್ ಜುರ್ಸೆನ್ ಎಂದು ಗುರುತಿಸಲಾಗಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆ ವಿದೇಶಿ ಪ್ರಜೆಯನ್ನು ಮೊದಲು ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶ ವಾಲ್ಪಪಾರೈನಲ್ಲಿನ ವಾಟರ್ಫಾಲ್ ಗಾರ್ಡನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಪೊಲಚಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸಿ ಪ್ರವಾಸಿಗ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
77 ವರ್ಷದ ಜರ್ಮನ್ ಪ್ರವಾಸಿಗ ಮೈಕೆಲ್ ಜುರ್ಸೆನ್ ಭಾರತದ ಪ್ರವಾಸದಲ್ಲಿರುವಾಗ ಈ ದುರ್ಘಟನೆ ನಡೆದಿದೆ. ಅವರು ಹಿಲ್ ರೋಡ್ನಲ್ಲಿ ಸಾಗುವಾಗ ಕಾಡಾನೆ ಇರುವುದನ್ನು ಗಮನಿಸದೆ ಈ ಅನಾಹುತವಾಗಿದೆ ಎಂದು ವರದಿಯಾಗಿದೆ.