ಕರ್ನಾಟಕ

karnataka

ETV Bharat / bharat

ಭಯೋತ್ಪಾದನೆಯ ಬೀಡಾಗಿದ್ದ ಕಾಶ್ಮೀರ 'ವಿಶ್ವ ಕರಕುಶಲ ನಗರ'ವಾಗಿ ಬದಲು! - Srinagar World Craft City - SRINAGAR WORLD CRAFT CITY

ಭಯೋತ್ಪಾದನೆ ಕೃತ್ಯಗಳಿಂದ ಕುಖ್ಯಾತಿ ಪಡೆದಿದ್ದ ಕಾಶ್ಮೀರ ಈಗ ಬದಲಾಗಿದೆ. ಇಲ್ಲಿನ ಕರಕುಶಲ ವಸ್ತುಗಳು ವಿಶ್ವಮನ್ನಣೆ ಪಡೆದಿವೆ. ಇದರಿಂದ ನಗರವು ವಿಶ್ವ ಕರಕುಶಲಗಳ ಬೀಡಾಗಿದೆ.

ಕಾಶ್ಮೀರ ವಿಶ್ವ ಕರಕುಶಲ ನಗರ
ಕಾಶ್ಮೀರ ವಿಶ್ವ ಕರಕುಶಲ ನಗರ (Courtesy: X@Jktpo_jk)

By ETV Bharat Karnataka Team

Published : Jun 24, 2024, 9:09 PM IST

ಶ್ರೀನಗರ:ಕಾಶ್ಮೀರಿ ಕಾರ್ಪೆಟ್​ಗಳು, ಶಾಲುಗಳು, ಮರದ ಕೆತ್ತನೆ, ಚೈನ್​ ಸ್ಟಿಚ್​ ಸೇರಿದಂತೆ ಹಲವು ಕರಕುಶಲ ವಸ್ತುಗಳ ಆಗರವಾಗಿರುವ ಜಮ್ಮು ಕಾಶ್ಮೀರದ ಬೇಸಿಗೆ ರಾಜಧಾನಿ ಕಾಶ್ಮೀರ ನಗರಕ್ಕೆ 'ವಿಶ್ವ ಕರಕುಶಲಗಳ ನಗರ' ಎಂಬ ಹೊಸ ಬಿರುದು ಬಂದಿದೆ. ಇದನ್ನು ಸಮಿತಿಯ ವಕ್ತಾರರು ದೃಢೀಕರಿಸಿದ್ದಾರೆ.

ವಿಶ್ವ ಕರಕುಶಲ ಸಮಿತಿಯು (World crafts council) ಇಲ್ಲಿನ ಶ್ರೀಮಂತ ಕರಕುಶಲ ಕಲೆಯನ್ನು ಗುರುತಿಸಿ, ವಿಶೇಷ ಅಭಿದಾನ ನೀಡಿದೆ. ಇದರಿಂದ ಕೈಮಗ್ಗ ಮತ್ತು ಕರಕುಶಲ ಕ್ಷೇತ್ರ ಇನ್ನಷ್ಟು ಉತ್ತೇಜನ ಪಡೆಯಲಿದೆ. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗೂ ಪ್ರಯೋಜನವನ್ನು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಗೌರವವು ನಗರದ ಶ್ರೀಮಂತ ಪರಂಪರೆ ಮತ್ತು ಕುಶಲಕರ್ಮಿಗಳ ಅಸಾಧಾರಣ ಕೌಶಲ್ಯಗಳನ್ನು ಜಗತ್ತಿಗೆ ಪರಿಚಯಿಸುತ್ತದೆ. ಅವರ ಕಲಾತ್ಮಕತೆಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗಲಿದೆ. ಕುಶಲಕರ್ಮಿಗಳ ಶ್ರಮ ಮತ್ತು ಸಮರ್ಪಣಾ ಭಾವದಿಂದ ಈ ನಗರ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ.

ಶ್ರೀಮಂತ ಸಾಂಸ್ಕೃತಿಕತೆಗೆ ಸಿಕ್ಕ ಮನ್ನಣೆ:ಈ ಬಗ್ಗೆ ಜಮ್ಮು ಕಾಶ್ಮೀರ ಗವರ್ನರ್​ ಮನೋಜ್​ ಸಿನ್ಹಾ ಮಾತನಾಡಿ, ಕುಶಲಕರ್ಮಿಗಳ ಕಠಿಣ ಪರಿಶ್ರಮ ಮತ್ತು ಅಸಾಧಾರಣ ಪ್ರತಿಭೆಗೆ ಸಿಕ್ಕ ಮನ್ನಣೆಯಾಗಿದೆ. ಇದು ಶ್ರೀನಗರದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ನಾವು ಬದ್ಧರಾಗಿದ್ದೇವೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ಅವರಿಗೆ ಧಕ್ಕುವಂತೆ ಮಾಡುತ್ತೇವೆ ಎಂದರು.

ಈ ಅಭಿದಾನವು ಕುಶಲಕರ್ಮಿ ಸಮುದಾಯಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ. ಇಲ್ಲಿನ ಕರಕುಶಲ ಮತ್ತು ಕೈಮಗ್ಗ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಿನ್ಹಾ ಅವರು ಇದೇ ವೇಳೆ ಹೇಳಿದ್ದಾರೆ.

ಮನ್ನಣೆಯಿಂದ ಏನು ಲಾಭ?:ಉತ್ಕೃಷ್ಟ ಗುಣಮಟ್ಟದ ಮತ್ತು ಸೂಕ್ಷ್ಮ ಕುಸುರಿ ಕಲೆಯಿಂದ ಕೂಡಿರುವ ಕಾಶ್ಮೀರಿ ಕರಕುಶಲ ಕಲೆಗಳಿಗೆ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಲಿವೆ. ಜಾಗತಿಕ ಮಾರುಕಟ್ಟೆಗೆ ಇಲ್ಲಿನ ವಸ್ತುಗಳು ಲಗ್ಗೆ ಇಡಲಿವೆ. ಈ ಉದ್ಯಮವು ವೇಗವರ್ಧನೆ ಪಡೆಯಲಿದೆ. ಜೊತೆಗೆ ಹೊಸ ಹೊಸ ಅನ್ವೇಷಣೆಗಳಿಗೂ ಇದು ಸಹಕಾರಿಯಾಗಲಿದೆ. ಇದರೊಂದಿಗೆ ಕಣಿವೆ ಪ್ರದೇಶದ ಪ್ರವಾಸೋದ್ಯಮವೂ ಬೆಳವಣಿಗೆ ಸಾಧಿಸಲಿದೆ. ಸಾಂಸ್ಕೃತಿಕ ವಲಯಕ್ಕೆ ಹೆಚ್ಚಿನ ಹೂಡಿಕೆ ಮತ್ತು ಅನುದಾನ ಹರಿದು ಬರುವ ಸಾಧ್ಯತೆ ಇದೆ. ಸಾಂಪ್ರದಾಯಿಕ ವಿಧಾನಗಳನ್ನು ಉಳಿಸಿಕೊಂಡು ಆಧುನಿಕ ತಂತ್ರಗಳು ಪರಿಚಯವಾಗಲಿವೆ.

ಶ್ರೀನಗರದ ಅನನ್ಯ ಕರಕುಶಲ ವಸ್ತುಗಳ ಬೇಡಿಕೆಯ ಹೆಚ್ಚಳವು ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಉದ್ಯೋಗ ಸೃಷ್ಟಿ, ಕುಶಲಕರ್ಮಿಗಳು ಮತ್ತು ಅವರ ಕುಟುಂಬಗಳ ಜೀವನವೂ ಸುಧಾರಿಸಲಿದೆ.

ಇದನ್ನೂ ಓದಿ:ನಿರ್ಗತಿಕ ಕುಟುಂಬಕ್ಕೆ ಕ್ರೌಡ್ ಫಂಡಿಂಗ್‌ ಮೂಲಕ ಮನೆ ನಿರ್ಮಿಸಿಕೊಟ್ಟ ಪಂಚಾಯತ್​ ಸದಸ್ಯ - Panchayath Member Humanity

ABOUT THE AUTHOR

...view details