ಚೆನ್ನೈ (ತಮಿಳುನಾಡು) :ನಿನ್ನೆ (ಜನವರಿ 24) ನಡೆದ ತಮಿಳುನಾಡು ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಮಹಿಳಾ ನೀತಿಗೆ ಅನುಮೋದನೆ ನೀಡಿದೆ. ರಾಜ್ಯ ಮಹಿಳಾ ನೀತಿಯಲ್ಲಿ ತಮಿಳುನಾಡು ಸರ್ಕಾರದಿಂದ ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯ ಮಹಿಳಾ ನೀತಿಯಲ್ಲಿ ವಿಶೇಷತೆಗಳು:-
- ಎಲ್ಲ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿ. ಗ್ರಾಮೀಣ ಪ್ರದೇಶಗಳಲ್ಲಿ ಈಗಿರುವ 100 ದಿನದ ಕೆಲಸದ ಯೋಜನೆಯನ್ನು ಹೆಚ್ಚುವರಿ 50 ದಿನಗಳವರೆಗೆ ವಿಸ್ತರಿಸುವುದು. (ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿರುತ್ತದೆ)
- 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡುವುದು ಮತ್ತು ಶಾಲೆ ಬಿಟ್ಟವರಿಗೆ ಶಿಕ್ಷಣ ಪುನಾರಂಭಿಸುವ ಅವಕಾಶ.
- ಸಾರ್ವಜನಿಕ ಖಾಸಗಿ ಉದ್ಯಮಗಳಲ್ಲಿ ನಾಯಕತ್ವ ಸ್ಥಾನದಲ್ಲಿರುವ ಮಹಿಳೆಯರಿಗೆ ಸಮಾನ ಹಕ್ಕುಗಳು.
- ರಾಜಕೀಯಕ್ಕೆ ಸೇರಲು ಬಯಸುವ ಮಹಿಳೆಯರಿಗೆ ಆರು ತಿಂಗಳ ವಿಶೇಷ ತರಬೇತಿ ಒದಗಿಸುವುದು ಹೊಸ ಮಹಿಳಾ ನೀತಿಯಲ್ಲಿ ಸೇರಿದೆ.
ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ :ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮಹಿಳೆಯರಿಗೆ 6 ತಿಂಗಳ ವಿಶೇಷ ಪ್ರಮಾಣಪತ್ರ ಕೋರ್ಸ್ ನೀಡಲಾಗುತ್ತದೆ. ಇದರಲ್ಲಿ ಸ್ಥಳೀಯ ಸರ್ಕಾರದಿಂದ ಎಂಎಲ್ಎ, ಎಂಪಿ ಹುದ್ದೆಗಳವರೆಗೆ ಕಾರ್ಯವೇನು? ಕಚೇರಿಯಲ್ಲಿದ್ದಾಗ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಹುದ್ದೆಯ ನಿರೀಕ್ಷೆಗಳೇನು? ಎಂಬುದನ್ನು ತರಬೇತಿ ವೇಳೆ ಕಲಿಸಲಾಗುತ್ತದೆ.
ಅಲ್ಲದೇ, ಕಚೇರಿಯಲ್ಲಿ ಸವಾಲುಗಳನ್ನು ಎದುರಿಸಲು ತರಬೇತಿ, ಮಹಿಳೆಯರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶಿಕ್ಷಣ ಮತ್ತು ರಾಜಕೀಯದಲ್ಲಿ ಸ್ಪರ್ಧಿಸುವ ಪ್ರಬುದ್ಧತೆಯನ್ನು ಸಹ ಈ ಕೋರ್ಸ್ ಅವಧಿಯಲ್ಲಿ ಕಲಿಸಲಾಗುತ್ತದೆ. ಈ ತರಬೇತಿಯು ಮಹಿಳೆಯರಿಗೆ ಕಚೇರಿ ವ್ಯವಹಾರಗಳನ್ನು ಸ್ವತಃ ನಿಭಾಯಿಸಲು ಈ ಕೋರ್ಸ್ ಸಹಾಯ ಮಾಡುತ್ತದೆ.