ಶ್ರೀನಗರ: ಕಾಶ್ಮೀರದ ಹಂದ್ವಾರ- ಬಾರಾಮುಲ್ಲಾ ಹೆದ್ದಾರಿಯಲ್ಲಿ ಶಂಕಿತ ಸುಧಾರಿತ ಸ್ಫೋಟಕ ಸ್ಫೋಟಕವನ್ನು (ಐಇಡಿ) ಪತ್ತೆ ಮಾಡಿದ್ದಾರೆ. ಬಳಿಕ ಅದನ್ನು ಭದ್ರತಾ ಪಡೆಯ ಸೈನಿಕರು ನಾಶಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮತ್ತು ಭದ್ರತಾ ಪಡೆಗಳು ಜಂಟಿ ಗಸ್ತು ವೇಳೆ ಅನುಮಾನಾಸ್ಪದ ಬ್ಯಾಗ್ವೊಂದು ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿನ ಲಂಗೇಟ್ ಹೆದ್ದಾರಿಯ ಪಕ್ಕದಲ್ಲಿ ಬಿದ್ದಿರುವುದನ್ನು ಗಮನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.