ಕರ್ನಾಟಕ

karnataka

ETV Bharat / bharat

ರಾಯ್​ಬರೇಲಿಯಲ್ಲಿ ಗಾಂಧಿ v/s ಗಾಂಧಿ ಸ್ಪರ್ಧೆಗೆ ಬಿಜೆಪಿ ತಂತ್ರ: ಸಂಸದ ವರುಣ್​ ಗಾಂಧಿ ಹೇಳಿದ್ದೇನು? - Varun Gandhi

ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಊಹಾಪೋಹದ ಮಧ್ಯೆ, ಅವರ ವಿರುದ್ಧ ಸಹೋದರ ಸಂಬಂಧಿ ವರುಣ್​ ಗಾಂಧಿಯನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ತಂತ್ರ ರೂಪಿಸಿದೆ.

ವರುಣ್​ ಗಾಂಧಿ
ವರುಣ್​ ಗಾಂಧಿ

By ETV Bharat Karnataka Team

Published : Apr 27, 2024, 2:14 PM IST

ನವದೆಹಲಿ:ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ನ ಏಕಮಾತ್ರ ಸಂಸದ ಸ್ಥಾನ ಉಳಿದಿರುವ ರಾಯ್​ಬರೇಲಿಯನ್ನೂ ಕಿತ್ತುಕೊಳ್ಳಲು ಬಿಜೆಪಿ ಭರ್ಜರಿ ರಣತಂತ್ರ ಹೆಣೆದಿದೆ. ಫಿಲಿಬಿತ್​ನಿಂದ ಟಿಕೆಟ್​ ತಪ್ಪಿಸಿಕೊಂಡಿರುವ ಸಂಸದ ವರುಣ್​ ಗಾಂಧಿಯನ್ನು ರಾಯ್​ಬರೇಲಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲು ಮುಂದಾಗಿದೆ. ಆದರೆ, ಇದನ್ನು ವರುಣ್​ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಉತ್ತರಪ್ರದೇಶದ ರಾಯ್​ಬರೇಲಿ ಮತ್ತು ಕೇಸರ್​ಗಂಜ್​ ಹೊರತಾಗಿ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ರಾಯ್​ಬರೇಲಿಯಲ್ಲಿ ಕಾಂಗ್ರೆಸ್​ನಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸವು ಸಾಧ್ಯತೆ ಕಾರಣ, ಅವರ ವಿರುದ್ಧ ಸಹೋದರ ವರುಣ್​ ಗಾಂಧಿಯನ್ನು ಕಣಕ್ಕಿಳಿಸಲು ಉತ್ಸುಕವಾಗಿತ್ತು. ಕ್ಷೇತ್ರದಲ್ಲಿ ಗಾಂಧಿ v/s ಗಾಂಧಿ ಸೆಣಸಾಟಕ್ಕೆ ತಂತ್ರ ರೂಪಿಸಲಾಗಿತ್ತು. ಆದರೆ, ಅದು ಕೈತಪ್ಪುವ ಸಾಧ್ಯತೆ ಇದೆ.

ರಾಯ್​ಬರೇಲಿಯಿಂದ ಪ್ರಿಯಾಂಕಾ ಕಣಕ್ಕೆ?:ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ರಾಯ್​ಬರೇಲಿ ಕ್ಷೇತ್ರದಿಂದ ಪುತ್ರ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಸೋನಿಯಾ ಅವರು ರಾಜ್ಯಸಭೆಗೆ ಆಯ್ಕೆಯಾದ ಕಾರಣ ಅವರು ಲೋಕ ಕಣದಿಂದ ದೂರ ಉಳಿದಿದ್ದಾರೆ.

ಇಂತಹ ಊಹಾಪೋಹಗಳ ನಡುವೆ ಬಿಜೆಪಿಯು ವರುಣ್ ಗಾಂಧಿ ಅವರನ್ನು ತಮ್ಮ ಸೋದರ ಸಂಬಂಧಿಯ ವಿರುದ್ಧ ಸ್ಪರ್ಧಿಸಲು ಆಫರ್​ ನೀಡಿದೆ. ಆದರೆ, ಅವರು ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಹಿಂದೇಟು ಹಾಕಿದ್ದಾಗಿ ಮೂಲಗಳು ತಿಳಿಸಿವೆ.

ವರುಣ್ ಗಾಂಧಿ ಅವರು ಪಿಲಿಭಿತ್‌ನ ಹಾಲಿ ಬಿಜೆಪಿ ಸಂಸದ. 2024 ರ ಲೋಕಸಭಾ ಚುನಾವಣೆಗೆ ಪಕ್ಷ ಅವರಿಗೆ ಪಿಲಿಭಿತ್ ಕ್ಷೇತ್ರದ ಟಿಕೆಟ್​ ನಿರಾಕರಿಸಿದೆ. ಅಲ್ಲಿ ಮಾಜಿ ಸಚಿವ ಜಿತಿನ್ ಪ್ರಸಾದ್​ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

'ಗಾಂಧಿ'ಗಳ ಸ್ಪರ್ಧೆಗೆ ಯೋಜನೆ:ಟಿಕೆಟ್​ ನಿರಾಕರಣೆಯಾದ ಬಳಿಕ ವರುಣ್ ಅವರು, ಪಿಲಿಭಿತ್ ಜನತೆಗೆ ಬಹಿರಂಗ ಪತ್ರ ಬರೆದಿದ್ದರು. ತಾವು ಈ ಕ್ಷೇತ್ರ ಮಗನಾಗಿ ಮುಂದುವರಿಯುವುದಾಗಿ ಹೇಳಿದ್ದರು. ಅವರ ತಾಯಿ, ಸಂಸದೆ ಮನೇಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದಿಂದ ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ರಾಯ್​ಬರೇಲಿ ಕ್ಷೇತ್ರದಲ್ಲಿ ಗಾಂಧಿ ಕುಟುಂಬಕ್ಕೆ ಯಾರು ಕಠಿಣ ಸವಾಲನ್ನು ಒಡ್ಡುತ್ತಾರೆ ಎಂಬ ಬಗ್ಗೆ ಬಿಜೆಪಿ ಹಲವಾರು ಸಮೀಕ್ಷೆಗಳನ್ನೂ ನಡೆಸಿದೆ. ಕ್ಷೇತ್ರದಲ್ಲಿ ರೋಚಕತೆ ಹೆಚ್ಚಿಸಲು ಗಾಂಧಿ ಕುಡಿಯನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿತ್ತು.

ಇನ್ನು, ರಾಯ್​ಬರೇಲಿ ಕ್ಷೇತ್ರವು ಕಾಂಗ್ರೆಸ್​ನ ಭದ್ರಕೋಟೆಯಾಗಿದೆ. ಇಲ್ಲಿಂದ 1967 ಮತ್ತು 1984 ರಲ್ಲಿ ಇಂದಿರಾ ಗಾಂಧಿ ಅವರು ಸ್ಪರ್ಧಿಸಿ ಪ್ರಧಾನಿಯಾಗಿದ್ದರು. ಜೊತೆಗೆ ಅರುಣ್ ನೆಹರು ಮತ್ತು ಶೀಲಾ ಕೌಲ್, 2004 ರಿಂದ ಸೋನಿಯಾ ಗಾಂಧಿ ಅವರು ಕ್ಷೇತ್ರದ ಚುನಾಯಿತರಾಗುತ್ತಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗಾಂಧಿ ಕುಟುಂಬದ ಮತ್ತೊಂದು ಭದ್ರಕೋಟೆಯಾಗಿದ್ದ ಅಮೇಠಿಯನ್ನು ವಶಪಡಿಸಿಕೊಂಡಿದ್ದರು. ರಾಹುಲ್​ ಗಾಂಧಿಯನ್ನು ಸೋಲಿಸಿದ್ದರು. ರಾಯ್‌ಬರೇಲಿ ಮಾತ್ರ ಇನ್ನೂ ಬಿಜೆಪಿ ಕೈವಶವಾಗಿಲ್ಲ.

ಇದನ್ನೂ ಓದಿ:ರಾಯ್​ಬರೇಲಿಗೆ ಪ್ರಿಯಾಂಕಾ, ಅಮೇಠಿಯಿಂದ ರಾಹುಲ್​ ಗಾಂಧಿ ಸ್ಪರ್ಧೆ: ಸಿಇಸಿ ಸಭೆಯಲ್ಲಿ ಇಂದು ಚರ್ಚೆ - CEC meeting

ABOUT THE AUTHOR

...view details