ನವದೆಹಲಿ :ಸಂಕ್ರಾಂತಿ ಮುನ್ನಾ ದಿನದಿಂದ ಆರಂಭವಾದ 45 ದಿನಗಳ ಕಾಲ ಸಾಗಿದ ಮಹಾ ಕುಂಭಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದ 1 ಟ್ರಿಲಿಯನ್ ಆರ್ಥಿಕತೆ ಗುರಿಗೆ ಕೂಡ ಇದು ಸಹಾಯ ಮಾಡಿದ್ದು, ಮಹಾ ಕುಂಭಮೇಳವು 3 ಲಕ್ಷ ಕೋಟಿ ರೂಪಾಯಿ ವಹಿವಾಟಿನ ತೆರಿಗೆಯು ರಾಜ್ಯದ ಆರ್ಥಿಕತೆಗೆ ಬಲ ತಂದಿದೆ.
ಜನವರಿ 13ರಿಂದ ಫೆ. 26ರ ವರೆಗೆ ಜರುಗಿದ ಮಹಾಕುಂಭ ಮೇಳದಲ್ಲಿ 66.21 ಕೋಟಿ ಭಕ್ತರು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಉದ್ಯಮ ತಜ್ಞರ ಪ್ರಕಾರ, ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿನ ಸರಕು ಮತ್ತು ಸೇವೆಯ ಮೂಲಕ 3 ಲಕ್ಷ ಕೋಟಿ ಉದ್ಯಮ ಚಟುವಟಿಕೆ ನಡೆದಿದೆ ಎಂದಿದ್ದಾರೆ.
ನಿರೀಕ್ಷೆಗೆ ಮೀರಿದ ವಹಿವಾಟು, ಭಕ್ತರು : ಮಹಾ ಕುಂಭಮೇಳ ಆರಂಭಕ್ಕೆ ಮೊದಲ 40 ಕೋಟಿ ಜನರು ಆಗಮನ ಮತ್ತು 2 ಲಕ್ಷ ಕೋಟಿ ಮೌಲ್ಯದ ಉದ್ಯಮದ ವಹಿವಾಟಿನ ಕುರಿತು ಅಂದಾಜಿಸಲಾಗಿತ್ತು. ಆದರೆ, ದೇಶ ಮತ್ತು ವಿದೇಶಗಳಿಂದ ಕಂಡುಬಂದ ಅಭೂತಪೂರ್ವ ಬೆಂಬಲದಿಂದ 66 ಕೋಟಿ ಜನರು ಈ ಧಾರ್ಮಿಕ ಮೇಳದಲ್ಲಿ ಭಾಗಿಯಾಗಿದ್ದು, ಇದು 3 ಲಕ್ಷ ಕೋಟಿಗೂ ಹೆಚ್ಚಿನ ವಹಿವಾಟಿಗೆ ಕಾರಣವಾಯಿತು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ತಿಳಿಸಿದರು.
ಮಹಾ ಕುಂಭ ಮೇಳದಿಂದ ವಿಮಾನ ದರವು ಕೂಡ ಹೆಚ್ಚಳಗೊಂಡಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಹಾಗೂ ವಾರದ ನಡುವಿನ ಸೀಸನ್ ಹೊರತಾದ ಸಮಯದಲ್ಲಿ ಇದು ಸ್ಥಿರವಾಗಿರಲಿದೆ.