ಬಿಜೆಪಿ ಗಲಭೆಕೋರ, ಭ್ರಷ್ಟ ಪಕ್ಷ; ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದ್ದಾರೆ: ಮಮತಾ ಬ್ಯಾನರ್ಜಿ - ಬಿಜೆಪಿ ವಿರುದ್ಧ ಮಮತಾ ವಾಗ್ದಾಳಿ
ಕೋಲ್ಕತ್ತಾ(ಪಶ್ಚಿಮ ಬಂಗಾಳ): ನಾವು ಈಗಿನಿಂದಲೇ ಕ್ರಿಯಾಶೀಲರಾಗಿರಬೇಕು. ಬಿಜೆಪಿಯನ್ನು ತೊಲಗಿಸಲು 2024ರ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಬೇಕಾಗಿದೆ ಎಂದು ಟಿಎಂಸಿ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಚುನಾವಣೆ ಚಾಣಕ್ಯ ಪ್ರಶಾಂತ್ ಕಿಶೋರ್ ಜೊತೆ ವೇದಿಕೆಯ ಮೇಲೆ ಕಾಣಿಸಿಕೊಂಡ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸಮಿತಿಯ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ, ಬಿಜೆಪಿ ಗಲಭೆಕೋರ ಮತ್ತು ಭ್ರಷ್ಟ ಪಕ್ಷವಾಗಿದೆ. ಪ್ರಜಾಪ್ರಭುತ್ವ ನಾಶಮಾಡಲು ಭಯಸುತ್ತಿದ್ದಾರೆ ಎಂದರು.
Last Updated : Feb 3, 2023, 8:18 PM IST