ಕರ್ನಾಟಕ

karnataka

ETV Bharat / videos

ಕೇರಳದ ವಯನಾಡು ಜಿಲ್ಲಾಧಿಕಾರಿಯಿಂದ ಕಥಕ್ಕಳಿ ಪ್ರದರ್ಶನ - ವಯನಾಡು ಜಿಲ್ಲಾಧಿಕಾರಿ ಎ ಗೀತಾ ಕಥಕ್ಕಳಿ ಪ್ರದರ್ಶನ

By

Published : Mar 28, 2022, 3:40 PM IST

Updated : Feb 3, 2023, 8:21 PM IST

ಕೇರಳದ ವಯನಾಡು ಜಿಲ್ಲಾಧಿಕಾರಿ ಎ.ಗೀತಾ ಅವರು ವಯನಾಡಿನ ವಲ್ಲಿಯೂರ್ಕಾವು ದೇವಸ್ಥಾನದ ಉತ್ಸವದಲ್ಲಿ ಕಥಕ್ಕಳಿ ಕಲಾ ಪ್ರಕಾರದಲ್ಲಿ ತಮ್ಮ ಪರಿಣತಿಯನ್ನು ಪ್ರದರ್ಶಿಸಿದ್ದಾರೆ. ಮೊದಲ ದಿನದ ನಳಚರಿತಂ ಪ್ರದರ್ಶನದಲ್ಲಿ ‘ದಮಯಂತಿ’ ಪಾತ್ರದಲ್ಲಿ ಕಾಣಿಸಿದ್ದಾರೆ. ಇದು ಗೀತಾ ಅವರ ಮೊದಲ ರಂಗ ಪ್ರದರ್ಶನವಾಗಿದ್ದರೂ, ಅವರು ಸಲೀಸಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಗೀತಾ ಅವರು ಕೊಟ್ಟಕ್ಕಲ್ ಸಿಎಂ ಉನ್ನಿಕೃಷ್ಣನ್ ಅವರ ಶಿಷ್ಯೆಯಾಗಿದ್ದು, ರಾತ್ರಿಯ ಸಮಯದಲ್ಲಿ ಕಥಕ್ಕಳಿ ಅಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗೀತಾ ಅವರು ಭರತನಾಟ್ಯ ಕಲಾವಿದೆಯೂ ಆಗಿದ್ದು, ಹಲವು ವೇದಿಕೆಗಳಲ್ಲಿ ಈಗಾಗಲೇ ಪ್ರದರ್ಶನ ನೀಡಿದ್ದಾರೆ.
Last Updated : Feb 3, 2023, 8:21 PM IST

ABOUT THE AUTHOR

...view details