ನೋಡಿ: ಉಕ್ರೇನ್ ಅಧ್ಯಕ್ಷರ ಮಾತಿಗೆ ಅಮೆರಿಕ ಕಾಂಗ್ರೆಸ್ ಸದಸ್ಯರಿಂದ ಎದ್ದು ನಿಂತು ಕರತಾಡನ - ಯುಎಸ್ ಕಾಂಗ್ರೆಸ್ನಲ್ಲಿ ಉಕ್ರೇನ್ ಅಧ್ಯಕ್ಷರ ಮಾತು
ಯುದ್ಧಪೀಡಿತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಸಂಸತ್ ಸದಸ್ಯರನ್ನು ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ್ದು, ಈ ಸಂದರ್ಭದಲ್ಲಿ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು. 'ರಷ್ಯಾ ನಮ್ಮ ಮೇಲೆ, ನಮ್ಮ ಭೂಮಿ, ನಗರಗಳ ಮೇಲೆ ಮಾತ್ರ ದಾಳಿ ಮಾಡಿಲ್ಲ. ನಮ್ಮ ಮೌಲ್ಯ, ಸ್ವತಂತ್ರವಾಗಿ ಬದುಕುವ ನಮ್ಮ ಹಕ್ಕಿನ ವಿರುದ್ಧವೂ ಆಕ್ರಮಣ ನಡೆಸಿದೆ. ನಮ್ಮದೇ ರೀತಿಯಲ್ಲಿ ಅಮೆರಿಕನ್ನರು ಕೂಡಾ ಕನಸು ಹೊಂದಿದ್ದರು. ಆದರೆ, 1941ರಲ್ಲಿ ಪರ್ಲ್ ಹರ್ಬಲ್ ದಾಳಿಯಿಂದ ಎಲ್ಲವೂ ಎರಡನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿತು' ಎಂದು ಅವರು ತಿಳಿಸಿದರು. ಈ ಹಿಂದೆ ಯುರೋಪಿಯನ್ ಪಾರ್ಲಿಮೆಂಟ್ ಉದ್ದೇಶಿಸಿ ಮಾತನಾಡಿದ್ದ ವೊಲೊಡಿಮಿರ್ ಝೆಲೆನ್ಸ್ಕಿ, ನಮ್ಮ ಭೂಮಿ ಮತ್ತು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದಿದ್ದರು.
Last Updated : Feb 3, 2023, 8:20 PM IST