ಮದುವೆ ಮಂಟಪದಲ್ಲೇ ಕುಷ್ಟಗಿ ಪಿಎಸ್ಐ ದಂಪತಿ ಸಖತ್ ಸ್ಟೆಪ್ಸ್- ವಿಡಿಯೋ ವೈರಲ್ - ಮದುವೆ ವೇದಿಕೆಯಲ್ಲಿ ಕುಷ್ಟಗಿ ಪಿಎಸ್ ಐ ಡ್ಯಾನ್ಸ್ ವಿಡಿಯೋ ವೈರಲ್
ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ನಾಯಕ ಅವರು ತಮ್ಮ ಮದುವೆ ಸಮಾರಂಭದಲ್ಲಿ ಪತ್ನಿ ರಾಧಪ್ರಿಯ ಅವರೊಂದಿಗೆ ಮಾರಿ ಕಣ್ಣು ಹೋರಿ ಮ್ಯಾಗೆ.. ಹಾಡಿಗೆ ಸಖತ್ ಸ್ಟೆಪ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕಳೆದ ಫೆ.19 ರಂದು ಸಿಂಧನೂರಿನ ಸಂಗಮ್ ಪ್ಯಾಲೇಸ್ನಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆದಿತ್ತು. ಈ ವೇದಿಕೆಯಲ್ಲಿಯೇ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಪಿಎಸ್ಐ ತಿಮ್ಮಣ್ಣ ನಾಯಕ್ ಅವರು ಪತ್ನಿಯ ಜೊತೆ ಹೆಜ್ಜೆ ಹಾಕಿ ರಂಜಿಸಿದರು. ಇದೇ ವೇಳೆ ನೀಲಿ ಕುರ್ತಾ, ಬಿಳಿ ಜುಬ್ಬಾ ಧರಿಸಿ ದೇಶಿ ಉಡುಗೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡ ಡ್ಯಾನ್ಸ್ ಮಾಡಿದ್ದಾರೆ.
Last Updated : Feb 3, 2023, 8:17 PM IST