'ಪ್ರೇಮಿ'ಗಾಗಿ ರಸ್ತೆಯಲ್ಲೇ ಕಾಲೇಜು ಹುಡುಗಿಯರ ಕಿತ್ತಾಟ: ವಿಡಿಯೋ - ತಮಿಳುನಾಡಿನ ಚೆನ್ನೈ ವಿದ್ಯಾರ್ಥಿನಿಯರು
ಚೆನ್ನೈ (ತಮಿಳುನಾಡು): ಪ್ರೇಮದ ವಿಷಯವಾಗಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ನಡು ರಸ್ತೆಯಲ್ಲೇ ಜಗಳವಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಇಲ್ಲಿನ ಅಣ್ಣಾ ಬಸ್ ನಿಲ್ದಾಣದಲ್ಲಿ ಒಂದೇ ಕಾಲೇಜಿನ ಇಬ್ಬರು ಪರಸ್ಪರ ಕೂದಲೆಳೆದು ಕಿತ್ತಾಡಿದರು. ಇಬ್ಬರೂ ಒಂದೇ ಯುವಕನನ್ನು ಪ್ರೀತಿಸುತ್ತಿದ್ದ ವಿಚಾರವಾಗಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿನಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
Last Updated : Feb 3, 2023, 8:22 PM IST