ಉತ್ತರ ಪ್ರದೇಶದಲ್ಲಿ ಯೋಗಿ ಮೋಡಿ.. ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ - ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಭ್ರಮ
ವಾರಣಾಸಿ(ಉತ್ತರ ಪ್ರದೇಶ): ತೀವ್ರ ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಲಖನೌದ ಬಿಜೆಪಿ ಕಚೇರಿಯಲ್ಲಿ ಸಂಭ್ರಮದಿಂದ ಹೋಳಿ ಆಡುವ ಮೂಲಕ ಯುಪಿ ಮೇ ಬಾಬಾ ಸರ್ಕಾರ ಎಂಬ ಘೋಷಣೆ ಕೂಗಿದ್ದಾರೆ. ಗೋರಖ್ಪುರ ನಗರದಿಂದ ಕಣಕ್ಕಿಳಿದಿರುವ ಯೋಗಿ ಆದಿತ್ಯನಾಥ್ ಕೂಡ 13 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆಯಲಿದ್ದಾರೆ.
Last Updated : Feb 3, 2023, 8:19 PM IST