ಕರ್ನಾಟಕ

karnataka

ETV Bharat / videos

ಶಿವಮೊಗ್ಗ: ಸಹ್ಯಾದ್ರಿ ಆವರಣದಲ್ಲಿ ಎರಡು ಆನೆಗಳು ಪ್ರತ್ಯಕ್ಷ - ಸಹ್ಯಾದ್ರಿ ಆವರಣದಲ್ಲಿ ಎರಡು ಆನೆಗಳು ಪ್ರತ್ಯಕ್ಷ

By

Published : Apr 3, 2022, 9:29 PM IST

Updated : Feb 3, 2023, 8:21 PM IST

ಇಂದು ಸಂಜೆ (ಭಾನುವಾರ) ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿವೆ. ಇದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದ ಆತಂಕಕ್ಕೆ ಕಾರಣವಾಗಿದೆ. ಸಂಜೆ ಆರು ಗಂಟೆ ವೇಳೆಗೆ ಸಿಬ್ಬಂದಿ ಕ್ವಾಟ್ರಸ್​ ಬಳಿ ಕಾಣಿಸಿಕೊಂಡ ಆನೆಗಳು ಸಂಜೆ 7.30ರ ಹೊತ್ತಿಗೆ ಕುವೆಂಪು ಪ್ರತಿಮೆ, ಗ್ರಂಥಾಲಯದ ಮುಂದೆ ನಡೆದಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೆಕ್ಯೂರಿಟಿ‌ ಸಿಬ್ಬಂದಿ‌ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಂದ ಹೊರಬರದಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನೂ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಲಿದ್ದಾರೆ ಎಂದು ವಿವಿ ಮೂಲಗಳಿಂದ ತಿಳಿದುಬಂದಿದೆ.
Last Updated : Feb 3, 2023, 8:21 PM IST

For All Latest Updates

TAGGED:

ABOUT THE AUTHOR

...view details