ರೋಪ್‌ವೇ ದುರಂತ : ಎರಡನೇ ದಿನದ ರಕ್ಷಣಾ ಕಾರ್ಯದಲ್ಲಿ ಮಹಿಳೆ ಸಾವು - ದಿಯೋಘರ್ನ ತ್ರಿಕೂಟ ಪರ್ವತ
ದಿಯೋಘರ್(ಜಾರ್ಖಂಡ್): ಜಾರ್ಖಂಡ್ನ ತ್ರಿಕೂಟ ಪರ್ವತ ರೋಪ್‌ವೇ ದುರಂತದಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಟ್ರಾಲಿ ಸಿಲುಕಿದ್ದವರು ರಕ್ಷಣಾ ಕಾರ್ಯಾಚರಣೆ ವೇಳೆ ಹಗ್ಗ ಸಿಲುಕಿ ಆಕೆ ಕೆಳಗೆ ಬಿದ್ದಿದ್ದಾರೆ. ಹೀಗಾಗಿ, ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ರಾಮನವಮಿ ದಿನದಂದು ದಿಯೋಘರ್ನ ತ್ರಿಕೂಟ ಪರ್ವತವನ್ನು ವೀಕ್ಷಿಸಲು ಹೆಚ್ಚಿನ ಜನರು ಬಂದಿದ್ದರು. ಈ ವೇಳೆ ತ್ರಿಕೂಟ್ ಪರ್ವತದ ಮೇಲಿನ ರೋಪ್ ವೇಯ ಆಕ್ಸಲ್ ಮುರಿದುಹೋಗಿ, ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿತ್ತು.
Last Updated : Feb 3, 2023, 8:22 PM IST