ಉತ್ತರಾಖಂಡ: ಕಾರು ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಯುವಕ - ವಿಡಿಯೋ - ಸಹಿಯಾ ತಿರಹಾ
ವಿಕಾಸನಗರ ( ಉತ್ತರಾಖಂಡ್): ಸಹಿಯಾ ಕ್ವಾನು ಮೋಟಾರು ರಸ್ತೆಯಲ್ಲಿ ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಸಹಿಯಾ ತಿರಹಾ ಎಂಬಲ್ಲಿ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ, ಯುವಕ ಗಾಳಿಯಲ್ಲಿ ತೂರಿ ಬಹುದೂರ ಬಿದ್ದಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಾಹಿಯಾ ಪೊಲೀಸ್ ಅಧಿಕಾರಿ ನೀರಜ್ ಕಥೈಟ್ ತಿಳಿಸಿದ್ದಾರೆ.