ಜುನಾಗಢ್‌ನ ಗಿರ್ನಾರ್ ಪರ್ವತದಲ್ಲಿ ಜಲಧಾರೆ: ವಿಡಿಯೋ - atmosphere on Girnar mountain of Junagadh
ಜುನಾಗಢ (ಗುಜರಾತ್): ಮಂಗಳವಾರ ಬೆಳಗ್ಗೆಯಿಂದಲೇ ಜುನಾಗಢ ನಗರ ಮತ್ತು ಗಿರ್ನಾರ್ ಪರ್ವತದಲ್ಲಿ ಮಳೆಯ ವಾತಾವರಣವಿತ್ತು. ಜುನಾಗಢದ ರಸ್ತೆಗಳು ಜಲಾವೃತಗೊಂಡಿದ್ದವು. ಅಲ್ಲದೇ ತುಂಬಾ ಮಳೆಯಾದ ಹಿನ್ನೆಲೆ ಗಿರ್ನಾರ್ ಪರ್ವತದಿಂದ ಸಾಕಷ್ಟು ನೀರು ಹರಿಯುತಿತ್ತು. ಇದರಿಂದ ಭಾವನಾಥ ತಾಳೇಟಿಯ ನದಿಯ ನಾಲೆಗಳೆಲ್ಲಾ ನೀರಿನಿಂದ ತುಂಬಿದ್ದವು. ಮಳೆಗಾಲ ಗಿರ್ನಾರ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.