ಜಲಪ್ರಳಯಕ್ಕೆ ತತ್ತರಿಸಿದ ಯಮಲೂರು.. ಸಂಚಾರಕ್ಕೆ ಟ್ರ್ಯಾಕ್ಟರ್ ಏರಿದ ಜನ - ಅಗ್ನಿಶಾಮಕ ಸಿಬ್ಬಂದಿ
ಬೆಂಗಳೂರು: ನಗರದಲ್ಲಿ ಎರಡು ಮೂರು ದಿನಗಳಿಂದಲೂ ಅಬ್ಬರಿಸುತ್ತಿರುವ ಮಹಾಮಳೆಗೆ ಯುಮಲೂರಿನ ಜನ ನರಕಯಾತನೆ ಅನುಭವಿಸುವಂತಾಗಿದೆ. ಮಳೆಯಿಂದಾಗಿ ಏರಿಯಾದ ರಸ್ತೆ ಮೇಲೆ ನಿಂತಿರುವ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗದ ಪರಿಣಾಮ ಜಲಪ್ರಳಯದ ಸ್ಥಿತಿ ನಿರ್ಮಾಣವಾಗಿದೆ. ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳು ನೀರಿನ ನಡುವೆ ಸಿಲುಕಿಹಾಕಿಕೊಂಡಿದ್ದು, ಅಗತ್ಯ ವಸ್ತುಗಳಿಗಾಗಿ ಜನರು, ಸ್ಕೂಲ್ ಕಾಲೇಜಿಗೆ ತೆರಳುವವರು ಓಡಾಟಕ್ಕೆ ಟ್ಯಾಕ್ಟರ್ ಅವಲಂಬಿಸಿದ್ದಾರೆ. ರಸ್ತೆ ಮೇಲೆ ನಿಂತ ನೀರಿನಲ್ಲಿ ಬೋಟ್ಗಳಲ್ಲಿ ಸಂಚರಿಸುವ ಮೂಲಕ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಜನರಿಗೆ ನೆರವಾಗುತ್ತಿದ್ದಾರೆ.