ಸಹೋದ್ಯೋಗಿ ಗುದದ್ವಾರಕ್ಕೆ ಅಧಿಕ ಒತ್ತಡ ಗಾಳಿಯ ಪೈಪ್ ಇಟ್ಟ ಕಾರ್ಮಿಕ: ಪ್ರಾಣಕ್ಕೆ ಕುತ್ತು ತಂದ ಚೇಷ್ಟೆ - ಪ್ರಾಣಕ್ಕೆ ಕುತ್ತು ತಂದ ಚೇಷ್ಟೆ
ಥಾಣೆಯ ಅಂಬರನಾಥ್ ನಗರದ ವಡೋಲ್ ಗ್ರಾಮದ ಕಂಪನಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕನೊಬ್ಬ ತಮಾಷೆಗೆಂದು ಅಧಿಕ ಒತ್ತಡದ ಗಾಳಿಯ ಪೈಪ್ ಅನ್ನು ಆತನ ಸಹೋದ್ಯೋಗಿ ಗುದದ್ವಾರಕ್ಕೆ ಅಳವಡಿಸಿ, ಹೊಟ್ಟೆಯೊಳಗೆ ಗಾಯಗೊಂಡಿರುವ ಘಟನೆ ನಡೆದಿದೆ. ತಕ್ಷಣವೇ ಸ್ಮೃತಿ ತಪ್ಪಿ ಬಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಆಪರೇಷನ್ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ಗಾಯಗೊಂಡ ಕಾರ್ಮಿಕನ ಕುಟುಂಬ ಸದಸ್ಯರು ಚೇಷ್ಟೆ ಮಾಡಿದ ಕಾರ್ಮಿಕನ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಂಬರನಾಥ್ ಠಾಣೆ ಪೊಲೀಸರು ಸಂತ್ರಸ್ತ ಕಾರ್ಮಿಕನನ್ನು ಭೇಟಿ ಮಾಡಿದ್ದು, ಕಾರ್ಮಿಕ ಇದು ಮೋಜಿನಲ್ಲಿ ನಡೆದಿದ್ದು, ಯಾವುದೇ ದೂರು ದಾಖಲಿಸಲು ಇಷ್ಟವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.