ಪಂಜಾಬ್ನಲ್ಲಿ ಭೀಕರ ಅಪಘಾತ: ಶಿಕ್ಷಕಿ ಮೇಲೆ ಹರಿದ ಟ್ರಕ್, ಸ್ಥಳದಲ್ಲೇ ದುರ್ಮರಣ - ಸ್ಕೂಟರ್ ಟ್ರಕ್ ಅಪಘಾತ
ಸಂಗ್ರೂರ್(ಪಂಜಾಬ್): ಪಂಜಾಬ್ನ ಸಂಗ್ರೂರ್ನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಟ್ರಕ್ವೊಂದು ಸ್ಕೂಟರ್ ಮೇಲೆ ಹರಿದು ಹೋಗಿದ್ದು, ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿಕ್ಷಕಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಟ್ರಕ್ ಹರಿದು ಹೋಗಿರುವ ವೇಗಕ್ಕೆ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 30 ವರ್ಷದ ಬವಿನಾ ದಗ್ರೋಲಿ ವಿಜ್ಞಾನ - ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಲೆ ಮುಗಿದ ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿಕ್ಷಕಿಗೆ 5 ವರ್ಷದ ಬಾಲಕ ಹಾಗೂ ಪತಿ ಇದ್ದಾರೆ.