ರಾಂಗ್ ಸೈಡ್ನಿಂದ ಬಂದು ಮಹಿಳೆಗೆ ಬೈಕ್ ಡಿಕ್ಕಿ: ಸವಾರನಿಗೆ ಶೂನಿಂದ ಥಳಿಸಿದ ಯುವತಿ! - ರಾಂಗ್ ಸೈಡ್ನಿಂದ ಬಂದು ಮಹಿಳೆಗೆ ಬೈಕ್ ಡಿಕ್ಕಿ
ಜಬಲ್ಪುರ್(ಮಧ್ಯಪ್ರದೇಶ): ಫೋನ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಯುವತಿಯೋರ್ವಳಿಗೆ ಯುವಕನೋರ್ವ ಬೈಕ್‌ನೊಂದಿಗೆ ಡಿಕ್ಕಿ ಹೊಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಆಕ್ರೋಶಗೊಂಡಿರುವ ಯುವತಿ ಆತನಿಗೆ ಶೂನಿಂದ ಥಳಿಸಿದ್ದಾಳೆ. ಇಲ್ಲಿನ ಓಮಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಸ್ತೆಯ ಮೇಲೆ ಯುವತಿ ತೆರಳುತ್ತಿದ್ದಳು. ಈ ವೇಳೆ ರಾಂಗ್ ಸೈಡ್ನಿಂದ ಬೈಕ್ ಮೇಲೆ ಬಂದ ವ್ಯಕ್ತಿ ಆಕೆಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ಕೋಪಗೊಂಡ ಯುವತಿ ಆತನಿಗೆ ಥಳಿಸಿದಳು.