ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳ ಹಿಂಡು... ಕಾಡಿಗಟ್ಟಲು ಅರಣ್ಯ ಇಲಾಖೆ ಪರದಾಟ - elephants entered into farmers land in haveri
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿವಪುರ ತಾಂಡಾ ಬಳಿಯ ಜಮೀನೊಂದಕ್ಕೆ ಕಾಡಾನೆ ಹಿಂಡು ನುಗ್ಗಿದೆ. ಸುಮಾರು ಆರು ಕಾಡಾನೆಗಳು ಈ ಗುಂಪಿನಲ್ಲಿವೆ. ಆಕಸ್ಮಿಕವಾಗಿ ಆನೆಗಳನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದು, ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.