ಕಾಡುಹಂದಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಜಲಾಶಯಕ್ಕೆ ಹಾರಿದ ಹಸುಗಳು.. ವಿಡಿಯೋ
ನಂದ್ಯಾಲ(ಆಂಧ್ರಪ್ರದೇಶ): ಕಾಡು ಹಂದಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನೂರಾರು ಹಸುಗಳು ಏಕಾಏಕಿ ಜಲಾಶಯಕ್ಕೆ ಜಿಗಿದಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ವೇಲುಗೋಡು ಜಲಾಶಯದಲ್ಲಿ ನಡೆದಿದೆ. ಕಾಡುಹಂದಿಗಳು ಅಟ್ಟಿಸಿಕೊಂಡು ಬರುತ್ತಿದ್ದಂತೆ ಹಸುಗಳ ಹಿಂಡು ಜಲಾಶಯಕ್ಕೆ ನುಗ್ಗಿವೆ. ಇದರಿಂದ ಆತಂಕಗೊಂಡ ಜಾನುವಾರು ಕಾಯುವ ವ್ಯಕ್ತಿ ಸ್ಥಳದಲ್ಲಿನ ಮೀನುಗಾರರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮೀನುಗಾರರು ದೋಣಿಯ ಸಹಾಯದಿಂದ ಅವುಗಳ ರಕ್ಷಣೆ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಾರು 500 ಹಸುಗಳು ಇದ್ದವು ಎನ್ನಲಾಗಿದೆ.