ಕೇಂದ್ರ ಬಜೆಟ್ ಬಗ್ಗೆ ಜನಸಾಮಾನ್ಯರು ಏನಂತಾರೆ? - ಬಜೆಟ್ ಅಧಿವೇಶನ
ಬೆಂಗಳೂರು: ಕೇಂದ್ರ ಬಜೆಟ್ ಬಡ, ಸಾಮಾನ್ಯ ವರ್ಗದ ಜನರ ಭರವಸೆ ಹುಸಿಗೊಳಿಸಿದೆ. ವ್ಯಾಪಾರಿಗಳು, ಆಟೋ ಚಾಲಕರು ಕೋವಿಡ್ ಸಂಕಷ್ಟದ ಬಳಿಕ ಬಜೆಟ್ನಲ್ಲಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದರು. ಆದ್ರೆ ಯಾವುದೇ ಯೋಜನೆ ಘೋಷಣೆಯಾಗಿಲ್ಲ. ಜೊತೆಗೆ ಹಳೇ ವಾಹನ ಸ್ಕ್ರ್ಯಾಪ್ ಮಾಡ್ಬೇಕು ಎಂಬ ಯೋಜನೆ ಬಡ ಚಾಲಕರಿಗೆ ಕಷ್ಟ ಆಗಲಿದೆ ಅಂತ ಆಟೋ ಚಾಲಕರು 'ಈಟಿವಿ ಭಾರತ'ಎದುರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ರೈತರಿಗೆ ಅನುಕೂಲವಾದರೆ ನಮಗೂ ಒಳ್ಳೆಯದೇ ಎಂಬುದು ಹೂವಿನ ವ್ಯಾಪಾರಿಗಳು ಅಭಿಪ್ರಾಯವಾಗಿದೆ. ಅಡುಗೆ ಎಣ್ಣೆ ಬೆಲೆ ಏರಿಸಿರುವ ಕೇಂದ್ರದ ನಿರ್ಧಾರಕ್ಕೆ ಗೃಹಿಣಿಯರು ಬೇಸರ ವ್ಯಕ್ತಪಡಿಸಿದ್ದಾರೆ.