ಬಯಲು ಸೀಮೆಯ ವರದಾನ ಕೆ.ಸಿ.ವ್ಯಾಲಿ ಶಾಪವಾಗುತ್ತಾ? - Latest News For KC Valley
ಬಯಲು ಸೀಮೆ ಜಿಲ್ಲೆ ಕೋಲಾರಕ್ಕೆ ಕೆ.ಸಿ ವ್ಯಾಲಿ ಯೋಜನೆ ಬಹುದಿನಗಳ ಕನಸಾಗಿತ್ತು.ಈ ಯೋಜನೆ ಸಾಕಾರಗೊಂಡು ನೀರು ಬಂದಾಗ ಇಲ್ಲಿನ ಜನತೆ ಕುಣಿದು ಕುಪ್ಪಳಿಸಿದ್ದರು. ಆಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆನಂದ ಭಾಷ್ಪ ಸುರಿಸಿದ್ದರು. ಆದರೆ, ಆ ಸಂತಸ ತುಂಬಾ ದಿನಗಳ ಕಾಲ ಉಳಿಯಲೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಜನರಲ್ಲಿ ಆತಂಕ ಶುರುವಾಗಿದೆ.