ಕೋಲಾರದಲ್ಲಿ ಅಂತರ್ಜಲ ಮಟ್ಟ ವೃದ್ಧಿ: ಜನರಲ್ಲಿ ಮನೆಮಾಡಿದ ಸಂತಸ - ಈಟಿವಿ ಭಾರತ ಕನ್ನಡ
ಕೋಲಾರ : ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಉಂಟಾಗಿತ್ತು. ಆದರೆ ಬರದನಾಡಿನ ಮೇಲೆ ವರುಣ ಕೃಪೆ ತೋರಿದ್ದರಿಂದ, ಜಿಲ್ಲಾದ್ಯಂತ ಕುಡಿಯುವ ನೀರಿಗಾಗಿ ಕೊರೆದ ಕೊಳವೆ ಬಾವಿಗಳಲ್ಲಿ ಉತ್ತಮ ನೀರು ದೊರೆಯುತ್ತಿದೆ. ಇತ್ತೀಚಿಗೆ ಮುಳಬಾಗಿಲು ತಾಲೂಕಿನ ಚಿಕ್ಕಗೊಲ್ಲಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಲಾಗಿದ್ದು,ಉತ್ತಮ ನೀರು ದೊರೆತಿದೆ. ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಜನರಲ್ಲಿ ಸಂತಸ ಮನೆಮಾಡಿದೆ. ಅಲ್ಲದೇ ಹಲವು ಬಾರಿ ಕೊಳವೆ ಬಾವಿ ಕೊರೆದರೂ ಒಂದಿಂಚು ನೀರು ಸಿಗದೆ ಪರಿಸ್ಥಿತಿಯಿಂದ, ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ಪಾತಾಳಕ್ಕೆ ಸೇರಿದ ಅಂತರ್ಜಲ ಮಟ್ಟ ವೃದ್ದಿಯಾಗಿದೆ.