ಪ್ರವಾಹದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ: ವಿಡಿಯೋ ವೈರಲ್ - NDRF Team rescue to couple in pasighat
ಭಾರಿ ಪ್ರವಾಹದಿಂದಾಗಿ ಪಾಸಿಘಾಟ್‌ನ ಸಿಬೊ ಕೊರೊಂಗ್ ನದಿಯಲ್ಲಿ ದಂಪತಿ ಅಪಾಯಕ್ಕೆ ಸಿಲುಕಿದ್ದರು. ನೀರಿನೊಳಗೆ ಸಿಲುಕಿದ್ದ ದಂಪತಿಯನ್ನು ಪೊಲೀಸರು ಮತ್ತು ಪೂರ್ವ ಸಿಯಾಂಗ್ ಜಿಲ್ಲಾ ವಿಪತ್ತು ನಿರ್ವಹಣಾ ಸಂಸ್ಥೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಇದೀಗ ದಂಪತಿ ರಕ್ಷಣೆ ಮಾಡುತ್ತಿರುವ ರಕ್ಷಣಾ ಪಡೆಯ ವಿಡಿಯೋ ವೈರಲ್ ಆಗಿದೆ.