9 ಕಿಲೋ ಮೀಟರ್ ದೂರು ಗರ್ಭಿಣಿ ಹೊತ್ತು ಸಾಗಿದ ಗ್ರಾಮಸ್ಥರು.. ವಿಡಿಯೋ - ಗರ್ಭಿಣಿ ಹೊತ್ತು ಸಾಗಿದ ಗ್ರಾಮಸ್ಥರು
ರೋಲಗುಂಟಾ(ಆಂಧ್ರಪ್ರದೇಶ): ಅನಕಪಲ್ಲಿ ಜಿಲ್ಲೆಯ ರೋಲಗುಂಟಾ ಮಂಡಲದಲ್ಲಿ ಗರ್ಭಣಿಯೊಬ್ಬಳನ್ನು ಸುಮಾರು 9 ಕಿಲೋ ಮೀಟರ್ ದೂರು ಡೋಲಿಯಲ್ಲಿ ಹೊತ್ತು ಸಾಗಿರುವ ಘಟನೆ ನಡೆದಿದೆ. ಮುಳಪೇಟ ಪಂಚಾಯಿತಿ ವ್ಯಾಪ್ತಿಯ ಜಾಜುಲಬಂಡ ಗ್ರಾಮದ ನಿವಾಸಿ ಪಾಂಗಿ ಶಾಂತಿ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ, ಸುಮಾರು 9 ಕಿ.ಮೀ ದೂರ ಡೋಲಿಯಲ್ಲಿ ಹೊತ್ತುಕೊಂಡು ರೋಳಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ತದನಂತರ ವಿಶಾಖಪಟ್ಟಣದ ಕೆಜಿಎಚ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಂದು ಮುಂಜಾನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವಾತಂತ್ರ್ಯ ಸಿಕ್ಕು ಇಷ್ಟೊಂದು ವರ್ಷಗಳು ಕಳೆದರೂ ನಮಗೆ ರಸ್ತೆ ಸಂಪರ್ಕವಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.