ಬಳ್ಳಾರಿಯ ಜೀನ್ಸ್ ಕಾರ್ಮಿಕರ ಮನೆಗೆ ರಾಹುಲ್ ಗಾಂಧಿ ಭೇಟಿ: ಸರಳತೆ ಮೆರೆದ ಕಾಂಗ್ರೆಸ್ ನಾಯಕ - ಜೀನ್ಸ್
ಬಳ್ಳಾರಿ: ನಗರದ ಕೌಲ್ ಬಜಾರ್ 30ನೇ ವಾರ್ಡ್ನಲ್ಲಿರುವ ಹಜರತ್ ಇರ್ಷಾದ್ ಅಲಿ ಬಾಬಾ ದರ್ಗಾಗೆ ರಾಹುಲ್ ಗಾಂಧಿ ಭೇಟಿ ನೀಡಿದರು. ತದನಂತರ ದರ್ಗಾ ಬಳಿಯಿರುವ ಜೀನ್ಸ್ ಕಾರ್ಮಿಕರ ಮನೆಗಳಿಗೆ ತೆರಳಿ ಉದ್ಯಮದ ಕಷ್ಟ ನಷ್ಟ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಬಿ.ನಾಗೇಂದ್ರ ಜೊತೆಯಲ್ಲಿದ್ದು, ಜೀನ್ಸ್ ಉದ್ಯಮ ಹಾಗೂ ಅದನ್ನು ನಂಬಿ ಬದುಕುತ್ತಿರುವ ಕಾರ್ಮಿಕರ ಸಮಸ್ಯೆ ಬಗ್ಗೆ ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟರು.ಈ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಮುಗಿಬಿದ್ದರು. ಬಹುತೇಕ ಎಲ್ಲರಿಗೂ ಹಸ್ತಲಾಘವ ಮಾಡಿದ ರಾಹುಲ್, ಸೆಲ್ಫಿ ತೆಗೆದುಕೊಳ್ಳಲು ಸಹಕರಿಸಿದರು. ರಾಹುಲ್ ಭೇಟಿಗೆ ಜೀನ್ಸ್ ಕಾರ್ಮಿಕರಾದ ಜಾವೀದ್, ವಿನೋದ್ ಹಾಗೂ ಅವರ ಕುಟುಂಬಸ್ಥರು ಸಂತಸವನ್ನು ವ್ಯಕ್ತಪಡಿಸಿದರು.
Last Updated : Oct 17, 2022, 5:15 PM IST