ಮೀನುಗಾರರನ್ನು ಸಮುದ್ರಕ್ಕೆ ಎತ್ತಿ ಎಸೆದ ದೊಡ್ಡ ಅಲೆ: ಭಯಾನಕ ವಿಡಿಯೋ - ನೀರಿನ ಅಲೆಗೆ ಹಾರಿ ಸಮುದ್ರಕ್ಕೆ ಬಿದ್ದ ಮೀನುಗಾರರು
ಅರಬ್ಬೀ ಸಮುದ್ರದಲ್ಲಿ ಭಾರೀ ಸುಳಿಗಾಳಿ ಉಂಟಾಗಿದ್ದು, ತಮಿಳುನಾಡು ಮತ್ತು ಕೇರಳದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದನ್ನು ನಿರ್ಲಕ್ಷಿಸಿ ಮೀನು ಹಿಡಿಯಲು ಹೋಗಿದ್ದ ಕೇರಳದ ಹಡಗೊಂದು ಸಮುದ್ರದ ಪ್ರಕ್ಷುಬ್ಧತೆಗೆ ಸಿಲುಕಿದೆ. ಮೀನುಗಾರಿಕೆ ಹಡಗು ದಡಕ್ಕೆ ಬರುತ್ತಿರುವಾಗ ದೊಡ್ಡ ಅಲೆಗೆ ಸಿಲುಕಿ ಡೋಲಾಯಮಾನವಾಗಿದೆ. ಈ ವೇಳೆ, ನಾಲ್ವರು ಮೀನುಗಾರರು ಸಮುದ್ರಕ್ಕೆ ಹಾರಿ ಬಿದ್ದಿದ್ದಾರೆ. ಇದರಲ್ಲಿ ಮೂವರನ್ನು ರಕ್ಷಿಸಲಾಗಿದೆ. ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.