ತುಂಬಿ ಹರಿಯುತ್ತಿರುವ ನದಿಯಲ್ಲಿ ಮಕ್ಕಳ ಚೆಲ್ಲಾಟ- ಶಾಕಿಂಗ್ ವಿಡಿಯೋ - ಹರಿಯುವ ನದಿಗೆ ಜಿಗಿದ ಮಕ್ಕಳು
ಗುವಾಹಟಿ(ಅಸ್ಸೋಂ): ಅಸ್ಸೋಂನಲ್ಲಿ ಮುಂಗಾರುಮಳೆ ಶುರುವಾಗಿದ್ದು, ನದಿಗಳಿಗೆ ನೀರು ಹರಿದು ಬರುತ್ತಿದೆ. ಸೋನಿತ್ಪುರ ಜಿಲ್ಲೆಯ ಗಬ್ಹೋರು ನದಿ ತುಂಬಿ ರಭಸವಾಗಿ ಹರಿಯುತ್ತಿದ್ದು, ಅದರಲ್ಲಿ ಮಕ್ಕಳು ಈಜಾಡುತ್ತಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರು ವೇಗವಾಗಿ ಹರಿಯುತ್ತಿದ್ದರೂ ಮಕ್ಕಳು ನದಿ ದಡದಿಂದ ನೀರಿಗೆ ಹಾರಿ ಖುಷಿ ಪಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ನೀರಿನ ಸೆಳೆತಕ್ಕೆ ಸಿಲುಕುವ ಭಯವಿಲ್ಲದೇ ಮಕ್ಕಳು ಆಟ ಆಡುತ್ತಿರುವುದು ನೋಡುಗರಲ್ಲಿ ಭಯ ಹುಟ್ಟಿಸುತ್ತದೆ.