ಮಹಾರಾಷ್ಟ್ರದಲ್ಲಿ ಭಾರಿ ಮಳೆ :ಚಿಮೂರ್ ತಾಲೂಕಿನಲ್ಲಿ ಪ್ರವಾಹ
ಮಹಾರಾಷ್ಟ್ರ: ಇಲ್ಲಿನ ಚಂದ್ರಪುರ ಜಿಲ್ಲೆಯ ಚಿಮೂರ್ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಾಲೂಕಿನ ಉಮಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಚಿಮೂರ್ ನಗರ ನೀರಿನಿಂದ ಆವೃತವಾಗಿದೆ. ಇಲ್ಲಿನ ಪೇಠ ಮೊಹಲ್ಲಾ, ಚಾವಡಿ, ಖಾತಿ ಕಮ್ತಾ, ಮಾಣಿಕ್ ನಗರ, ಕ್ರಾಂತಿ ನಗರ, ಉಪ ಜಿಲ್ಲಾಸ್ಪತ್ರೆ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಚಿಮೂರ್ ತಾಲೂಕಿನ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವರೆಗೆ ಒಟ್ಟು 41 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.