ಶಂಕಿತ ಮಕ್ಕಳ ಅಪಹರಣಕಾರನ ಥಳಿಸಿ ಕೊಂದ ಗ್ರಾಮಸ್ಥರು-ವಿಡಿಯೋ - ಮಕ್ಕಳ ಕಳ್ಳರು
ಅಸ್ಸೋಂನ ವಿವಿಧ ಭಾಗಗಳಲ್ಲಿ ಮಕ್ಕಳ ಕಳ್ಳರು ಕಾಣಿಸಿಕೊಂಡಿರುವ ಬೆನ್ನಲ್ಲೇ ಧೇಮಾಜಿ ಜಿಲ್ಲೆಯ ಜೊನೈನಲ್ಲಿ ಅಪಹರಣಕಾರ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬನಿಗೆ ಗುಂಪೊಂದು ಥಳಿಸಿ, ಕೊಂದಿರುವ ಘಟನೆ ನಡೆದಿದೆ. ಬುಧವಾರ ರಾತ್ರಿ ತಾಯಿಯ ಮಡಿಲಿನಲ್ಲಿದ್ದ ಮಗುವನ್ನು ಎಳೆದೊಯ್ಯಲು ಈ ವ್ಯಕ್ತಿ ಪ್ರಯತ್ನಿಸಿದ್ದ ಎನ್ನಲಾಗ್ತಿದೆ. ಆತನಿಂದ ಮಗುವನ್ನು ರಕ್ಷಿಸಿಕೊಳ್ಳಲು ತಾಯಿ ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಗ್ರಾಮಸ್ಥರು ಆತನನ್ನು ಬೆನ್ನಟ್ಟಿ ಬೆನ್ನಟ್ಟಿ ಬೈಕುಂಠಪುರ ಪ್ರದೇಶದಲ್ಲಿ ಸೆರೆಹಿಡಿದಿದ್ದಾರೆ. ಆತನಿಗೆ ಗ್ರಾಮಸ್ಥರು ಥಳಿಸಿದ್ದು, ಸಾಯುವ ಸ್ಥಿತಿಗೆ ತಲುಪಿದ್ದ ಆತನನ್ನು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿಸಿದ್ದಾರೆ. ಆಸ್ಪತ್ರೆಗೆ ಸಾಗಿಸಿದರೂ ಸಹ ತೀವ್ರ ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ವ್ಯಕ್ತಿಯ ನಿಖರ ಗುರುತು ಪತ್ತೆಯಾಗಿಲ್ಲ.