ರಸ್ತೆಗುರುಳಿದ 'ವಿಕ್ರಾಂತ್ ರೋಣ' ಕಟೌಟ್ - ಊರ್ವಶಿ ಥಿಯೇಟರ್
ಬೆಂಗಳೂರು: ಜುಲೈ 28ರಂದು ತೆರೆಕಂಡ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದ ಭಾರಿ ಗಾತ್ರದ ಕಟೌಟ್ ತಡರಾತ್ರಿ ರಸ್ತೆಗುರುಳಿದೆ. ನಗರದ ಊರ್ವಶಿ ಥಿಯೇಟರ್ ಮುಂದೆ ಅಳವಡಿಸಿದ್ದ ಕಟೌಟ್ ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಾರಗಳ ಭಾರ ತಡೆಯಲಾಗದೇ ಕಟೌಟ್ ನೆಲಕ್ಕುರುಳಿದೆ. ಚಿತ್ರಮಂದಿರ ಸಿಬ್ಬಂದಿ ರಸ್ತೆ ಮೇಲೆ ಬಿದ್ದ ಕಟೌಟ್ ತೆರವುಗೊಳಿಸಿದ್ದಾರೆ.