ಸಿಂದಗಿಯಲ್ಲಿ ಚಿಕಿತ್ಸೆ ದೊರೆಯದೇ ರಾತ್ರಿ ಅಲೆದಾಡಿದ ರೋಗಿ, ಕೊನೆಗೆ ಡಿಸಿ ನೆರವು - ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ರೋಗಿಗೆ ವಿಜಯಪುರ ಡಿಸಿ ನೆರವು
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬ, ಸಿಂದಗಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯದೇ ಇಡೀ ರಾತ್ರಿ ಅಲೆದಾಡಿದ್ದ. ಆದರೆ, ವೈದ್ಯರು ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿ ಅಮಾನವೀಯತೆ ಮೆರೆದಿದ್ದರು. ಶುಕ್ರವಾರ ಬೆಳಗ್ಗೆ ವಿಜಯಪುರಕ್ಕೆ ಬಂದ ರೋಗಿಯ ಕಷ್ಟಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ.