ವಿಜಯನಗರ: ಪೆಟ್ರೋಲ್ ಬಂಕ್ನಲ್ಲಿ ರಾಜಾರೋಷವಾಗಿ ಓಡಾಡಿದ ಕರಡಿ - bear walk in a petrol bunk at Vijayanagara
ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಪೆಟ್ರೋಲ್ ಬಂಕ್ ಆವರಣದಲ್ಲಿ ಕರಡಿಯೊಂದು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಕರಡಿ ಧಾಮವಿದೆ. ಹೀಗಾಗಿ ಇಲ್ಲಿ ಸಹಜವಾಗಿಯೇ ಕರಡಿಗಳ ಕಾಟ ಹೆಚ್ಚಾಗಿದೆ. ಕರಡಿ ಧಾಮ ಇರುವ ಅರಣ್ಯದಲ್ಲಿ ನೀರು, ಆಹಾರ ಸಿಗದೆ ಇದ್ದಾಗ ಕರಡಿಗಳು ಆಹಾರ ಅರಸಿ ರೈತರ ಜಮೀನು ಮತ್ತು ಊರೊಳಗೆ ನುಗ್ಗುತ್ತವೆ.
TAGGED:
bear walk in a petrol bunk