ಮೋದಿ ಡೌನ್ ಡೌನ್ ಎಂದ ಬಾಡಿಗೆ ಮಹಿಳಾ ಕಾರ್ಯಕರ್ತೆ ಎಡವಟ್ಟು.. ಭರತ್ ಶೆಟ್ಟಿ ನಗೆಪಾಟಲಿಗೀಡು.. - ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಘಟನೆ
ಬೆಂಗಳೂರು : ರಾಕೇಶ್ ಟಿಕಾಯತ್ಗೆ ಮಸಿ ಬಳಿದ ಘಟನೆ ವೇಳೆ ಕಾರ್ಯಕರ್ತೆಯ ವರ್ತನೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ. ಮಸಿ ಬಳಿದ ಪ್ರಕರಣದ ಆರೋಪಿ ಭರತ್ ಶೆಟ್ಟಿ ಮೋದಿ ಮೋದಿ ಅಂತಾ ಜೈಕಾರ್ ಕೂಗಿದರೆ ಮಹಿಳಾ ಕಾರ್ಯಕರ್ತೆ ಉಮಾದೇವಿ ಮೋದಿ ಮೋದಿ ಅಂದಾಗ ಡೌನ್ ಡೌನ್ ಅಂತಾ ಕೂಗಿದ್ದಾರೆ. ಈ ಸಮಯದಲ್ಲಿ ಭರತ್ ಶೆಟ್ಟಿ ಜಿಂದಾಬಾದ್ ಅಂತಾ ಹೇಳಿ ಎಂದು ಹೇಳಿ ಕೊಟ್ಟಿದ್ದಾರೆ. ಈ ವೇಳೆ ಉಮಾದೇವಿ ತಬ್ಬಿಬ್ಬಾಗಿ ನೋಡ್ತಿದ್ರು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ..
Last Updated : May 31, 2022, 4:44 PM IST