ಬಿಯರ್ ಬಾಟಲಿಯನ್ನು ತಲೆ ಮೇಲೆ ಇಟ್ಟುಕೊಂಡು, ರಸ್ತೆಯಲ್ಲಿ ನೃತ್ಯ ಮಾಡಿದ ಮಹಿಳೆ - ಡ್ಯಾನ್ಸ್
ಚಿಕ್ಕಮಗಳೂರು : ನಡು ರಸ್ತೆಯಲ್ಲಿ ತಲೆ ಮೇಲೆ ಮದ್ಯದ ಬಾಟಲಿ ಹೊತ್ತು ಮಹಿಳೆಯೊಬ್ಬಳು ಡ್ಯಾನ್ಸ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಒಮ್ಮೆ ಎಣ್ಣೆ ಒಳಗೆ ಸೇರಿದರೆ ಎಷ್ಟೋ ಮಂದಿ ಮೈ ಮರೆತು ಬಿಡುತ್ತಾರೆ. ಮಹಿಳೆಯರು ಪುರುಷರಿಗೇನೂ ಕಡಿಮೆ ಇಲ್ಲ ಎಂಬಂತೆ ಮದ್ಯ ಸೇವಿಸಿ ರಸ್ತೆಯಲ್ಲಿಯೇ ನೃತ್ಯ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬಳು ಕುಡಿದ ಅಮಲಿನಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾಳೆ. ನಡು ರಸ್ತೆಯಲ್ಲಿ ಸೀರೆಯುಟ್ಟ ಮಹಿಳೆ ತಲೆ ಮೇಲೆ ಬಿಯರ್ ಬಾಟಲಿ ಹೊತ್ತುಕೊಂಡು, ಕೈಗಳ ಸಹಾಯವಿಲ್ಲದೇ ಮಸ್ತ್ ಆಗಿ ಕುಣಿದಿದ್ದಾಳೆ.