ಹಿಮಾಚಲ ಪ್ರದೇಶದಲ್ಲಿ ವಿಪರೀತ ಮಳೆ, ಕೊಳದಂತಾದ ಅಟಲ್ ಸುರಂಗ.. - ಕೊಳದಂತಾದ ಅಟಲ್ ಸುರಂಗ
ಕುಲು(ಹಿಮಾಚಲ ಪ್ರದೇಶ): ಅಟಲ್ ಟನಲ್ ರೋಲ್ಟಾಂಗ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕುಲುವಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅಟಲ್ ಸುರಂಗದ ಗೋಡೆಯಲ್ಲಿ ನೀರು ಜಿನುಗುವ ಮತ್ತು ಜಲಪಾತದಂತೆ ಹರಿಯುತ್ತಿರುವ ವಿಡಿಯೋ ಇದಾಗಿದೆ. ಮಳೆ ನೀರು ಸುರಂಗದ ಒಳಗೂ ಹರಿಯುತ್ತಿದೆ. ಆದರೆ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿದೆ.