ಎಷ್ಟು ಸಿಟ್ಟಿತಂದ್ರೇ, ಬೋನಿನಲ್ಲಿ ಬಂಧಿಯಾಗಿದ್ದ ಚಿರತೆಯನ್ನೇ ಸಜೀವ ದಹನ ಮಾಡಿದ ಜನರು.. - guldar burnt alive
ಪೌರಿ(ಉತ್ತರಾಖಂಡ): ಗರ್ವಾಲ್ ಅರಣ್ಯ ವಿಭಾಗದ ನಾಗದೇವ್ ವ್ಯಾಪ್ತಿಯ ಸಪ್ಲೋಡಿ ಗ್ರಾಮದಲ್ಲಿ ಪಂಜರದಲ್ಲಿ ಸಿಕ್ಕಿ ಬಿದ್ದ ಚಿರತೆಯನ್ನು ಗ್ರಾಮಸ್ಥರು ಸುಟ್ಟು ಹಾಕಿದ ಘಟನೆ ನಡೆದಿದೆ. ಚಿರತೆ ಮೇ 15ರಂದು ಸಪ್ಲೋಡಿ ಗ್ರಾಮದ ಮಹಿಳೆಯನ್ನು ಕೊಂದು ಹಾಕಿತ್ತು ಮತ್ತು ಸೋಮವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡಿತ್ತು. ಚಿರತೆ ಹಿಡಿಯಲು ಅರಣ್ಯ ಇಲಾಖೆ ಎರಡು ಬೋನ್ಗಳನ್ನು ಇಟ್ಟಿತ್ತು. ಬೆಳಗ್ಗೆ ಚಿರತೆ ಬೋನಿನಲ್ಲಿ ಇರುವುದನ್ನು ಕಂಡ ಗ್ರಾಮಸ್ಥರು ಆಕ್ರೋಶದಿಂದ ಸುಟ್ಟು ಹಾಕಿದ್ದಾರೆ. ಗ್ರಾಮಸ್ಥರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.