ತುಮಕೂರು: ಗ್ರಿಲ್ಗೆ ಸಿಲುಕಿದ ಆರೂವರೆ ಅಡಿ ಉದ್ದದ ಹಾವು- ವಿಡಿಯೋ - ವಿಡಿಯೋ
ತುಮಕೂರು: ಜಿಲ್ಲೆಯ ಸಿದ್ದೇಶ್ವರ ಲೇ ಔಟ್ನ ಮಹೇಶ್ ಎಂಬುವವರ ಮನೆಯಲ್ಲಿ ಕಬ್ಬಿಣದ ಗ್ರಿಲ್ಗೆ ಆರೂವರೆ ಅಡಿ ಉದ್ದದ ಹಾವು ಸಿಲುಕಿಕೊಂಡಿತ್ತು. ಹಾವಿನ ಒದ್ದಾಟ ಕಂಡು ಮಹೇಶ್ ಅವರು ಉರಗ ತಜ್ಞ ದಿಲೀಪ್ ಅವರಿಗೆ ತಿಳಿಸಿದ್ದಾರೆ. ದಿಲೀಪ್ ಅವರು ಹಾವನ್ನು ಹಿಡಿದು ವೈದ್ಯರಿಂದ ಗ್ರಿಲ್ ತೆಗೆಸಿದ್ದಾರೆ. ನಂತರ ದೇವರಾಯನ ದುರ್ಗದ ಅರಣ್ಯ ಪ್ರದೇಶಕ್ಕೆ ಹಾವನ್ನು ಬಿಟ್ಟಿದ್ದಾರೆ.