Video - ಕೆಮ್ಮಣ್ಣು ಗುಂಡಿಯ ಪ್ರವಾಸಿ ಸ್ಥಳದಲ್ಲಿ ಮೂರು ಹುಲಿಗಳು ಪ್ರತ್ಯಕ್ಷ - video
ಚಿಕ್ಕಮಗಳೂರು : ಜಿಲ್ಲೆಯ ಕೆಮ್ಮಣ್ಣು ಗುಂಡಿ ಹಾಗೂ ಹೆಬ್ಬೆ ಜಲಪಾತದ ಮಾರ್ಗದಲ್ಲಿ ಪ್ರವಾಸಿಗರಿಗೆ ಹುಲಿಗಳ ದರ್ಶನವಾಗಿದೆ. ಕೆಮ್ಮಣ್ಣು ಗುಂಡಿಗೆ ಹೋಗುವ ದಾರಿ ನಡುವೆ ಒಂದು ಹುಲಿ ಕಾಣಸಿಕೊಂಡಿದೆ. ಮತ್ತೆ ಹೆಬ್ಬೆ ಜಲಪಾತದ ಕಡೆಗೆ ಹೋಗುವ ಮಾರ್ಗದಲ್ಲಿ ಎರಡು ಹುಲಿಗಳು ಪ್ರವಾಸಿಗರಿದ್ದ ಜೀಪ್ಗೆ 20 ನಿಮಿಷ ಅಡ್ಡಲಾಗಿ ನಿಂತಿದ್ದವು. ಈ ಪ್ರದೇಶದಲ್ಲಿ ಹುಲಿಗಳು ಕಾಣಸಿಗುವುದು ಬಹಳ ಅಪರೂಪ ಎನ್ನಲಾಗ್ತಿದೆ.