ಮೈದುಂಬಿ ಹರಿಯುತ್ತಿರುವ ಕಬಿನಿಯ ವಿಹಂಗಮ ನೋಟ - ಕೇರಳದಲ್ಲಿ ಮಳೆ ಹೆಚ್ಚಾದ ಕಾರಣ ಕಬಬಿನಿ ತುಂಬಿ ಹರಿಯುತ್ತಿದೆ
ಮೈಸೂರು: ಕಬಿನಿ ಜಲಾಶಯ ಮೈದುಂಬಿ ಹರಿಯುತ್ತಿರುವ ವಿಹಂಗಮ ನೋಟ, ಡ್ರೋಣ್ ಕ್ಯಾಮರಾದಲ್ಲಿ ಸರಿಯಾಗಿದೆ. ಕೇರಳದ ವೈನಾಡು ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವರಿಂದ, ಕಬಿನಿ ಜಲಾಶಯ ಮೈದುಂಬಿ ಹರಿಯುತ್ತಿದೆ. ಕಬಿನಿ ಜಲಾಶಯ 2,285 ಅಡಿ ಗರಿಷ್ಠ ಮಟ್ಟವಿದ್ದು, ಈಗಾಗಲೇ ಜಲಾಶಯದಲ್ಲಿ 2,282 ಅಡಿ ನೀರಿನ ಮಟ್ಟ ತಲುಪಿದೆ. ಹೀಗಾಗಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ಗಳಿಂದ ನೀರು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯ ಹೊರ ಹರಿವು ಹೆಚ್ಚಾದಂತೆ ನದಿಪಾತ್ರದ ಹಲವು ಗ್ರಾಮಗಳಿಗೆ ನಡುಕ ಶುರುವಾಗಿದೆ.